ಕಾಸರಗೋಡು: ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾ ಮಟ್ಟದ ಮಾಧ್ಯಮ ನಿಗಾ ಕೇಂದ್ರವನ್ನು ಜಿಲ್ಲಾ ಮಾಹಿತಿ ಕಛೇರಿ ಪಿಆರ್ ಚೇಂಬರ್‍ನಲ್ಲಿ ಚಟುವಟಿಕೆ ಆರಂಭಿಸಲಾಯಿತು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಇನ್‍ಬಾಶೇಖರ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಪೆÇಲೀಸ್‍ಮುಖ್ಯಸ್ಥ ಪಿ.ಬಿಜೋಯ್, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ, ಆರ್‍ಡಿಒ ಪಿ.ಬಿನು ಮೋನ್, ಎಂಸಿಎಂಸಿ ಸದಸ್ಯ ಪೆÇ್ರ.ವಿ.ಗೋಪಿನಾಥ್, ಮಾಧ್ಯಮ ನೋಡಲ್ ಅಧಿಕಾರಿ ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಚುನಾವಣಾ ವೆಚ್ಚ ಪರಿವೀಕ್ಷಣಾ ನೋಡಲ್ ಅಧಿಕಾರಿ ವಿ.ಚಂದ್ರನ್, ಐಟಿ ಮಿಷನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಕಪಿಲದೇವ್, ಎಂ.ಸಿ.ಎಂ.ಸಿ ಸಿಬ್ಬಂದಿ ಭಾಗವಹಿಸಿದ್ದರು.
ಮಾಧ್ಯಮ ಕೇಂದ್ರವು ಪತ್ರಿಕಾ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆಗಾಗಿ ವಿಸ್ತಾರವಾದ ವ್ಯವಸ್ಥೆಯನ್ನು ಹೊಂದಿದ್ದು, ಇದಕ್ಕಾಗಿ ವಿಶೇಷ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಜಾಹೀರಾತುಗಳಿಗೆ ಪೂರ್ವಾನುಮತಿ ನೀಡುವ ಕಾರ್ಯವನ್ನು ಹೊಂದಿದೆ. ಜಿಲ್ಲಾಧಿಕಾರಿ ಕೆ.ಇನ್‍ಬಾಶೇಖರ್ ಅಧ್ಯಕ್ಷರಾಗಿ, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂಧನ್ ಎಂಸಿಎಂಸಿ ಸದಸ್ಯ ಕಾರ್ಯದರ್ಶಿ ಮತ್ತು ಮಾಧ್ಯಮ ಸಾಮಾಜಿಕ ಮಾಧ್ಯಮ ನೋಡಲ್ ಅಧಿಕಾರಿಯಾಗಿ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ ಕಾರ್ಯನಿರ್ವಹಿಸುತ್ತಿದೆ. ದೃಶ್ಯ ಮತ್ತು ಶ್ರಾವ್ಯ ಪತ್ರಿಕಾ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ, ಪಾವತಿಸಿದ ಸುದ್ದಿಗಳನ್ನು ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡುವುದರ ಜತೆಗೆ ಚುನಾವಣಾ ವೀಕ್ಷಕರು, ಚುನಾವಣಾಧಿಕಾರಿಗಳು ಮತ್ತು ಚುನಾವಣಾ ಲೆಕ್ಕಪತ್ರ ಇಲಾಖೆಗೆ ದೈನಂದಿನ ವರದಿಗಳನ್ನು ಒದಗಿಸುವುದು ಕೇಂದ್ರದ ಮುಖ್ಯ ಕಾರ್ಯಗಳಾಗಿದೆ.




.jpeg)
