ತಿರುವನಂತಪುರಂ: ಸಮಗ್ರ ಶಿಕ್ಷಾ ಕೇರಳ (ಎಸ್‍ಎಸ್‍ಕೆ)ಯು ಸ್ಟಾರ್ಸ್ ಯೋಜನೆಯಡಿ ಮಧ್ಯ ಬೇಸಿಗೆ ರಜೆಯಲ್ಲಿ ಶಾಲೆಗಳಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸುತ್ತಿದೆ.
ಸರ್ಕಾರದ ಮಾಹಿತಿ ಪ್ರಕಾರ 11,319 ಶಾಲೆಗಳಿಗೆ 4 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಪ್ರತಿ ಶಾಲೆಗೆ 3000 ರಿಂದ 5000 ರೂ.ವರೆಗೆ ನೀಡಲಾಗುತ್ತದೆ.
1 ಮತ್ತು 2 ನೇ ತರಗತಿಯ ಮಕ್ಕಳ ಮಾತೃಭಾಷಾ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸಲು ಜಾರಿಗೆ ತರುತ್ತಿರುವ 'ಮಲಯಾಳಂ - ಮಧುರಂ' ಯೋಜನೆಯ ಮೂಲಕ ಮಕ್ಕಳಿಗೆ ಪುಸ್ತಕಗಳು ಲಭ್ಯವಾಗಲಿವೆ. ರಜೆಯ ಸಮಯದಲ್ಲಿ ಕನಿಷ್ಠ 8 ಪುಸ್ತಕಗಳನ್ನು ಓದಲು ಮಕ್ಕಳಿಗೆ ಪ್ರೋತ್ಸಾಹಿಸಲಾಗುತ್ತದೆ. 9100 ಸರ್ಕಾರಿ ಮತ್ತು ಅನುದಾನಿತ ಎಲ್‍ಪಿ ಶಾಲೆಗಳಿಗೆ ತಲಾ 80 ಪುಸ್ತಕಗಳು ಮತ್ತು ಶೇಖರಣಾ ಕಪಾಟುಗಳನ್ನು ಒದಗಿಸಲಾಗುವುದು. ಇದಕ್ಕಾಗಿ 5 ಕೋಟಿ ಮೀಸಲಿಡಲಾಗಿದೆ.




