HEALTH TIPS

ಭಾರತ -ಪಾಕಿಸ್ತಾನ ಗಡಿಯಲ್ಲಿ ಎರಡು ಡ್ರೋನ್‌ ಪತ್ತೆ

               ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯಲ್ಲಿರುವ ಪಂಜಾಬ್‌ನ ಅಮೃತಸರ ಹಾಗೂ ತರಣ್‌ ತಾರಣ್‌ ಜಿಲ್ಲೆಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಎರಡು ಡ್ರೋನ್‌ಗಳನ್ನು ವಶಪಡಿಸಿಕೊಂಡಿದೆ.

               ಅಮೃತಸರದ ಪಂಜ್‌ಗ್ರೇನ್‌ ಗ್ರಾಮದ ಸಮೀಪದ ಹೊಲದಲ್ಲಿ ಭಾಗಶಃ ಹಾನಿಗೊಳಗಾಗಿದ್ದ ಡ್ರೋನ್‌ವೊಂದನ್ನು ಮಂಗಳವಾರ ಬಿಎಸ್‌ಎಫ್‌ ವಶಪಡಿಸಿಕೊಂಡಿದೆ.

                 ಹೊಲದಲ್ಲಿ ಡ್ರೋನ್‌ ಕಂಡು ರೈತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತರಣ್‌ ತಾರಣ್‌ ಜಿಲ್ಲೆಯ ತೆಕಲನ್‌ ಗ್ರಾಮದ ಸಮೀಪದಲ್ಲಿ ಬುಧವಾರ ಮತ್ತೊಂದು ಡ್ರೋನ್‌ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತೂ ರೈತರೇ ಮಾಹಿತಿ ನೀಡಿದ್ದರು ಎಂದು ಬಿಎಸ್‌ಎಫ್‌ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries