ತಿರುವನಂತಪುರಂ: ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದ್ದು, ವಿದ್ಯುತ್ ಬಳಕೆಯಲ್ಲೂ ಏರಿಕೆಯಾಗಿದೆ. ಇದರ ಭಾಗವಾಗಿ ರಾತ್ರಿ ವೇಳೆ ವೋಲ್ಟೇಜ್ ಕಡಿಮೆಯಾಗುತ್ತಿದೆ ಎಂದು ವರದಿಯಾಗಿದೆ.
ಫೀಡರ್ ಗಳಲ್ಲಿ 11 ಕೆ.ವಿ ಈಗ ಒಂಬತ್ತು-10 ಕೆ.ವಿ. ವೋಲ್ಟೇಜ್ ಮಾತ್ರ ತಲುಪಿದೆ. ಇದರಿಂದ ಮನೆಗಳಿಗೆ ಬರುತ್ತಿರುವ ಸಿಂಗಲ್ ಫೇಸ್ ವಿದ್ಯುತ್ 190-170 ವೋಲ್ಟ್‍ಗೆ ಇಳಿದಿದೆ. ರಾತ್ರಿಯ ಹೊರೆಯೆಲ್ಲ ಕೂಡಿ ಬಂದಾಗ 11 ಕೆ.ವಿ. ಫೀಡರ್‍ಗಳು ಆಫ್ ಆಗುತ್ತಿವೆ.
ಉಪಕೇಂದ್ರಗಳಲ್ಲಿನ ಲೋಡ್‍ಗಳಲ್ಲಿಯೂ ಭಾರಿ ಹೆಚ್ಚಳವಾಗಿದೆ. ಮಾರ್ಚ್‍ನ ಅಂದಾಜಿನ ಪ್ರಕಾರ, ಸಂಜೆಯ ಗರಿಷ್ಠ ಬಳಕೆ 5150 ಮೆಗಾವ್ಯಾಟ್ ಆಗಿದೆ. ಇದು ಕಳೆದ ಐದು ವರ್ಷಗಳ ಬಳಕೆಗಿಂತ ಹೆಚ್ಚು. ಪ್ರಸ್ತುತ ಹಗಲಿನಲ್ಲಿ 3874 ಮೆ.ವ್ಯಾ.ಬಳಕೆಯಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ 10.3 ಕೋಟಿ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಈ ವರ್ಷ ಮಾರ್ಚ್ 13 ರಂದು 10.2 ಕೋಟಿ ಯೂನಿಟ್ ತಲುಪಿದೆ. ಕಡಮೆ ವೋಲ್ಟೇಜ್, ವಿದ್ಯುತ್ ಉಪಕರಣವನ್ನು ಕಾರ್ಯನಿರ್ವಹಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ವಿದ್ಯುತ್ ಬಿಲ್ ಮೊತ್ತವೂ ಹೆಚ್ಚಾಗಲಿದೆ.
ಪವರ್ ಲೋಡ್ (ಮೆಗಾ ವ್ಯಾಟ್ ಗಳಲ್ಲಿ)
ವರ್ಷ - ಮಾರ್ಚ್ - ಏಪ್ರಿಲ್
2024 - 5150 - -
2023 - 4494 - 5024
2022 - 4380 - 4225
2021- 4257 - 4251
2020- 4182 - 3787





