HEALTH TIPS

ಮಹಿಳಾ ಪ್ರಾತಿನಿಧ್ಯ: ಕೇರಳದ ಅಭ್ಯರ್ಥಿಗಳ ಪಟ್ಟಿಯಲ್ಲಿ ಎನ್.ಡಿ.ಎ. ಮುಂಚೂಣಿಯಲ್ಲಿ

                  ಕೊಚ್ಚಿ: ಕೇರಳದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಚಿತ್ರಣ ಹೊರಬಿದ್ದಾಗ ಮಹಿಳಾ ಪ್ರಾತಿನಿಧ್ಯದ ಹೆಚ್ಚಳದಲ್ಲಿ ಎನ್.ಡಿ.ಎ.ಒಕ್ಕೂಟ ಖಾತ್ರಿಪಡಿಸುವಲ್ಲಿ ಮೇಲುಗೈ ದಾಖಲಿಸಿದೆ. 

               20 ಸ್ಥಾನಗಳ ಪೈಕಿ ಎನ್‍ಡಿಎ ಅಭ್ಯರ್ಥಿಯಾಗಿ ಐವರು ಮಹಿಳೆಯರು ಕಣದಲ್ಲಿದ್ದಾರೆ. ಎಂ.ಎಲ್. ಅಶ್ವಿನಿ (ಕಾಸರಗೋಡು), ನಿವೇದಿತಾ ಸುಬ್ರಮಣ್ಯಂ (ಪೆÇನ್ನಾನಿ), ಡಾ. ಟಿ.ಎನ್. ಸರಸು (ಆಲತ್ತೂರು), ಶೋಭಾ ಸುರೇಂದ್ರನ್ (ಆಲಪ್ಪುಳ), ಅಡ್ವ. ಸಂಗೀತಾ ವಿಶ್ವನಾಥನ್ (ಇಡುಕ್ಕಿ) ಎನ್.ಡಿ.ಎ.ಅಭ್ಯರ್ಥಿಗಳಾಗಿ ಕೇರಳದಲ್ಲಿ ಕಣದಲ್ಲಿರುವ ಮಹಿಳಾ ಮಣಿಗಳು. ನಾಲ್ವರು ಬಿಜೆಪಿ ಅಭ್ಯರ್ಥಿಗಳು ಮತ್ತು ಅಡ್ವ. ಸಂಗೀತಾ ಬಿಡಿಜೆಎಸ್ ಅಭ್ಯರ್ಥಿ.

              ಲೋಕಸಭೆ ಮತ್ತು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ‘ನಾರೀ ಶಕ್ತಿ ವಂದನ್ ಅಧಿನಿಯ’ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದ ಬಳಿಕ ನಡೆಯುತ್ತಿರುವ ಮೊದಲ ಲೋಕಸಭೆ ಚುನಾವಣೆಯಲ್ಲಿ ಎನ್‍ಡಿಎ ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೇ.25ರಷ್ಟು ಮಹಿಳೆಯರನ್ನು ಸೇರಿಸಿಕೊಂಡಿದೆ. 

            ಕೇರಳದಲ್ಲಿ ಎಲ್ ಡಿಎಫ್ ನ ಅಭ್ಯರ್ಥಿ ಪಟ್ಟಿಯಲ್ಲಿ ಮೂವರು ಮಹಿಳೆಯರು ಕಣದಲ್ಲಿದ್ದಾರೆ. 15 ಶೇ.ಮೀಸಲಾತಿ ಲೆಕ್ಕ ಹಾಕಿದರೆ ಎರ್ನಾಕುಳಂನಲ್ಲಿ ಸ್ಪರ್ಧಿಸುತ್ತಿರುವ ಪಿ.ಜೆ. ಶೈನ್, ವಡಗರದಲ್ಲಿ ಸ್ಪರ್ಧಿಸಿರುವ ಕೆ.ಕೆ. ಶೈಲಜಾ ಸಿಪಿಎಂ ಪ್ರತಿನಿಧಿಗಳು. ವಯನಾಡಿನಲ್ಲಿ ಸಿಪಿಐಯ ಆನ್ನಿ ರಾಜಾ ಮತ್ತೊಬ್ಬರು. 

             ಮುಂದಿನ 10 ವರ್ಷಗಳಲ್ಲಿ ಶೇಕಡಾ 50 ರಷ್ಟು ಮಹಿಳಾ ಮುಖ್ಯಮಂತ್ರಿಗಳನ್ನು ಮಾಡುವ ಗುರಿಯನ್ನು ಹೊಂದಿರುವ ರಾಹುಲ್ ಗಾಂಧಿಯವರ ಕಾಂಗ್ರೆಸ್ ನಿಂದ ಕೇರಳದ ಪರಿಸ್ಥಿತಿ ಕರುಣಾಜನಕವಾಗಿದೆ. ಮಹಿಳೆಯರಿಗೆ ಕೇವಲ ಒಂದು ಸ್ಥಾನ ಮಾತ್ರ ಮೀಸಲಿಡಲಾಗಿದೆ. ಯುಡಿಎಫ್‍ನ ಏಕೈಕ ಮಹಿಳಾ ಪ್ರತಿನಿಧಿ ರಮ್ಯಾ ಹರಿದಾಸ್ ಅವರು ಆಲತ್ತೂರಿನಿಂದ ಸ್ಪರ್ಧಿಸಿದ್ದಾರೆ. ಮಹಿಳಾ ಪ್ರಾತಿನಿಧ್ಯ ಕಡಿಮೆ ಎಂಬ ಕಾರಣಕ್ಕೆ ಪಕ್ಷದೊಳಗೆ ಅತೃಪ್ತಿಯೂ ಕೇಳಿಬಂದಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries