ಮಂಜೇಶ್ವರ: ಹೊಸಂಗಡಿ ಸನಿಹದ ದುರ್ಗಿಪಳ್ಳ ನಿವಾಸಿ, ಹೊಸಂಗಡಿ ಪೇಟೆಯಲ್ಲಿ ಸುಮಾರು ಐದು ದಶಕಗಳಿಂದ ವ್ಯಾಪಾರಿಯಾಗಿ, ಪತ್ರಿಕಾ ವಿತರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣ ಶೆಟ್ಟಿಗಾರ್(78)ಅಲ್ಪ ಕಾಲದ ಅಸೌಖ್ಯದ ಮಧ್ಯೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
ಹೊಸಂಗಡಿಯಲ್ಲಿ'ನವೀನ್ ಸಟೋರ್'ಎಂಬ ವ್ಯಾಪಾರಿ ಸಂಸ್ಥೆ ನಡೆಸುತ್ತಿದ್ದ ಇವರು, ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿದ್ದರು. ಸಿಪಿಎಂ ಹಿರಿಯ ಸದಸ್ಯರಾಗಿದ್ದರು. ಹೊಸಂಗಡಿ ರಾಮತ್ತಮಜಲ್ ಸಾರ್ವಜನಿಕ ರುದ್ರಭೂಮಿ ಸಮಿತಿ ಕಾರ್ಯದರ್ಶಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಂಜೇಶ್ವರ ಘಟಕದ ವೆಲ್ಫೇರ್ ಸೊಸೈಟಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.





