HEALTH TIPS

ಧರ್ಮತ್ತಡ್ಕ ಶಾಲೆಯಲ್ಲಿ ಅಧ್ಯಾಪಿಕೆಯರಿಗೆ ವಿದಾಯಕೂಟ

                    ಕುಂಬಳೆ: ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯಲ್ಲಿ ಈ ವರ್ಷ ವೃತ್ತಿ ಜೀವನದಿಂದ ವಿರಮಿಸುತ್ತಿರುವ ಅಧ್ಯಾಪಿಕೆಯರಿಗೆ ಬುಧವಾರ ವಿದಾಯಕೂಟವನ್ನು ಏರ್ಪಡಿಸಲಾಯಿತು.

               ವಿದ್ಯಾಸಂಸ್ಥೆಗಳ ಗೌರವ ಪ್ರಬಂಧಕಿ ಶಾರದಾ ಅಮ್ಮ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲಎನ್. ರಾಮಚಂದ್ರ ಭಟ್, ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲ್, ಎಂ.ಪಿ.ಟಿ.ಎ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಯು.ಪಿ ಶಾಲಾ  ವ್ಯವಸ್ಥಾಪಕಿ ವಿಜಯಶ್ರೀ, ಪಿ.ಟಿ.ಎ ಅಧ್ಯಕ್ಷ  ಅಶೋಕ, ಎಂ.ಪಿ.ಟಿ.ಎ ಅಧ್ಯಕ್ಷೆ ಜಯಲಕ್ಷ್ಮಿ, ನಿವೃತ್ತ ಮುಖ್ಯೋಪಾಧ್ಯಾಯ  ರಾಮಚಂದ್ರ ಭಟ್ ಉಳುವಾನ ಶುಭಹಾರೈಸಿದರು.


                   ಈ ವರ್ಷ ನಿವೃತ್ತಿ ಹೊಂದಲಿರುವ ಹೈಸ್ಕೂಲ್ ಇಂಗ್ಲೀಷ್ ಅಧ್ಯಾಪಿಕೆ ಉಷಾ ಕೆ.ಆರ್  ಹಾಗೂ ಯು.ಪಿ ಶಾಲಾ ಹಿಂದಿ ಅಧ್ಯಾಪಕಿ ಪರಮೇಶ್ವರಿ ಅಮ್ಮ  ಇವರಿಗೆ ಹೈಸ್ಕೂಲ್, ಹೈಯರ್ ಸೆಕೆಂಡರಿ ಹಾಗೂ ಯು.ಪಿ ಶಾಲಾ ವಿಭಾಗದಿಂದ ಸನ್ಮಾನಿಸಲಾಯಿತು. ಈಶ್ವರಿ.ಡಿ ಹಾಗೂ  ರಾಮಮೋಹನ ಚೆಕ್ಕೆ ಸನ್ಮಾನ ಪತ್ರ ವಾಚಿಸಿದರು. ಸಹೋದ್ಯೋಗಿಗಳು ಹಾಗೂ ಸನ್ಮಾನಿತರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.ಹೈಸ್ಕೂಲ್ ಮುಖ್ಯೋಪಾಧ್ಯಾಯ ಈ.ಎಚ್ ಗೋವಿಂದ ಭಟ್ ಸ್ವಾಗತಿಸಿ, ಯು.ಪಿ ವಿಭಾಗದ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ವಂದಿಸಿದರು. ಈಶ್ವರಿ ಡಿ ಹಾಗೂ ಶ್ವೇತ ಕುಮಾರಿ ಎಂ ಪ್ರಾರ್ಥಿಸಿದರು. ಶಿವನಾರಾಯಣ ಭಟ್,  ಶಶಿಧರ ಕೆ, ಪ್ರಶಾಂತ ಹೊಳ್ಳ, ಶಿವಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries