ತ್ರಿಶೂರ್: ಕೊಚ್ಚಿನ್ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷರು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಕೊಚ್ಚಿನ್ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ಅಖಿಲ ಕೇರಳ ಎಳುತ್ತಚ್ಚನ್ ಸಮಾಜದ ಮಾಜಿ ಅಧ್ಯಕ್ಷ ಅಡ್ವ. ಎಂ.ಎ.ಕೃಷ್ಣನುಣ್ಣಿ, ಕೆಪಿಸಿಸಿ ವಿಚಾರ ವಿಭಾಗದ ಪದಾಧಿಕಾರಿ ಹಾಗೂ ಕಾಂಗ್ರೆಸ್ ಕ್ಷೇತ್ರ ಕಾರ್ಯದರ್ಶಿ ಸಿ.ಎನ್., ಸಜಿ, ಜಿಲ್ಲಾ ಸಹಕಾರಿ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ಜಿ. ಅರವಿಂದಾಕ್ಷನ್, ಪ್ರಿಯದರ್ಶಿನಿ ಪಬ್ಲಿಕೇಷನ್ ಸೊಸೈಟಿ ಜಿಲ್ಲಾ ಜಂಟಿ ಕಾರ್ಯದರ್ಶಿ ಹಾಗೂ ಎಳುತ್ತಚ್ಚನ್ ಸಮಾಜಂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಎ. ರವೀಂದ್ರನ್ ಬಿಜೆಪಿ ಸೇರಿದರು.
ಬಿಜೆಪಿ ಜಿಲ್ಲಾ ಕಚೇರಿ ನಮೋ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಕೇರಳ ಪ್ರಭಾÀರಿ ಪ್ರಕಾಶ್ ಜಾವಡೇಕರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಅಡ್ವ.ಕೆ.ಕೆ. ಅನೀಶ್ ಕುಮಾರ್, ರಾಜ್ಯ ಉಪಾಧ್ಯಕ್ಷರುಗಳಾದ ಅಡ್ವ. ಬಿ.ಗೋಪಾಲಕೃಷ್ಣನ್, ಸಿ.ಸದಾನಂದನ್ ಮಾಸ್ತರ್, ಪ್ರಾದೇಶಿಕ ಅಧ್ಯಕ್ಷ ವಿ. ಉಣ್ಣಿಕೃಷ್ಣನ್ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಅಡ್ವ.ರವಿಕುಮಾರ್ ಉಪ್ಪತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಸ್ಟಿನ್ ಜೇಕಬ್, ಅಡ್ವ.ಕೆ.ಆರ್.ಹರಿ, ರಾಜ್ಯ ಸಮಿತಿ ಸದಸ್ಯ ಉಲ್ಲಾಸ್ ಬಾಬು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.





