ವಯನಾಡು: ಕಾಡಾನೆ ದಾಳಿಗೆ ಆದಿವಾಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಮೆಪ್ಪಾಡಿಯಲ್ಲಿ ನಡೆದಿದೆ. ಪರಪ್ಪನಪರ ಕಾಲೋನಿಯ ಸುರೇಶ್ ಅವರ ಪತ್ನಿ ಮಿನಿ (45) ಮೃತರು.
ಸುರೇಶ್ ಕೂಡ ಈ ಸಂದರ್ಭ ಗಂಭೀರವಾಗಿ ಗಾಯಗೊಂಡಿದ್ದಾರೆ. ವಯನಾಡ್ ಮಲಪ್ಪುರಂ ಜಿಲ್ಲೆಯ ಗಡಿ ಪ್ರದೇಶದಲ್ಲಿ ಕಾಡಾನೆ ದಾಳಿ ನಡೆದಿದೆ.
ಕಾಡಿನಲ್ಲಿ ಜೇನು ಸಂಗ್ರಹಿಸಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮೆಪ್ಪಾಡಿ ಮತ್ತು ನಿಲಂಬೂರಿನ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಚಾಲಿಯಾರ್ ಕರಾವಳಿಯಿಂದ ಸುಮಾರು 10 ಕಿ.ಮೀ ದೂರದ ಕಾಡಿನಲ್ಲಿ ಘಟನೆ ನಡೆದಿದೆ.





