ತಿರುವನಂತಪುರಂ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವ ನಟಿ ಅರುಂಧತಿ ನಾಯರ್ ಅವರು ರಾಜಧಾನಿಯ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಸ್ಥಿತಿಯಲ್ಲಿದ್ದಾರೆ.
ನಟಿಯ ಕುಟುಂಬ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ನಟಿ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ವೇಳೆಯಲ್ಲೇ ಈ ರಸ್ತೆ ಅಪಘಾತ ಸಂಭವಿಸಿದೆ.
ಇದೇ ತಿಂಗಳ 15ರಂದು ರಾತ್ರಿ ಕೋವಳಂನಲ್ಲಿ ತನ್ನ ಸಂಬಂಧಿಯೊಂದಿಗೆ ಬೈಕ್‍ನಲ್ಲಿ ಸಂಚರಿಸುತ್ತಿದ್ದಾಗ ಪಘಾತಕ್ಕೀಡಾಗಿದ್ದರು. ಬೈಕ್ ಹಿಂಬದಿಯಲ್ಲಿದ್ದ ಅರುಂಧತಿ ರಸ್ತೆಗೆ ಬಿದ್ದಿದ್ದಾರೆ. ಅವರಿಗೆ ಡಿಕ್ಕಿ ಹೊಡೆದ ಆಟೋರಿಕ್ಷಾ ನಿಲ್ಲದೆ ಪಲಾಯನಗೈದಿತ್ತು. ತಲೆ, ಭುಜ ಮತ್ತು ಕೈಗೆ ತೀವ್ರ ಗಾಯಗಳಾಗಿರುವ ನಟಿ ತಿರುವನಂತಪುರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರುಂಧತಿ ಖಾಸಗಿ ಸಂಸ್ಥೆಯೊಂದರಲ್ಲಿ ಭದ್ರತಾ ಉದ್ಯೋಗಿಯಾಗಿರುವ ಮುರಳೀಧರನ್ ನಾಯರ್ ಮತ್ತು ಅನಿತಾ ದಂಪತಿಯ ಹಿರಿಯ ಪುತ್ರಿ. ಅರುಂಧತಿ ಸೈತಾನ್ ಚಿತ್ರದಲ್ಲಿ ವಿಜಯ್ ಆಂಟೋನಿ ಅವರೊಂದಿಗೆ ತಮಿಳಿನಲ್ಲಿ ಪಾದಾರ್ಪಣೆ ಮಾಡಿದ್ದರು. ತಮಿಳಿನ ಯಾವರುಮ್ ವಲ್ಲವರೆ ಮತ್ತು ತೌಸಂಡ್ ಪಾಕ್ರ್ಸೆಸ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಮಲಯಾಳಂ ಚಿತ್ರಗಳಾದ ಒಟ್ಟಕ್ಕೋರು ಅಕವಂಕನ್ ಮತ್ತು ವಿರುನ್‍ನಲ್ಲಿಯೂ ನಟಿಸಿದ್ದಾರೆ.
ಯೂಟ್ಯೂಬ್‍ನಲ್ಲಿ ಪ್ರೀಮಿಯರ್ ಪದ್ಮಿನಿ ಸರಣಿಯಲ್ಲೂ ಮಿಂಚಿದ್ದರೂ ಚಲಚಿತ್ರ ಕಲಾವಿದರ ಒಕ್ಕೂಟ ಅಮ್ಮದÀಲ್ಲಿ ಸದಸ್ಯತ್ವ ಪಡೆಯಲು ಸಾಧ್ಯವಾಗಲಿಲ್ಲ. ಚಿಕಿತ್ಸೆಗಾಗಿ ಕುಟುಂಬ ಈಗ ಸುಮಾರು 10 ಲಕ್ಷ ರೂ.ವ್ಯಯಿಸಿದೆ. ಅರುಂಧತಿ ಮತ್ತು ಅವರ ಕುಟುಂಬ ತಿರುವನಂತಪುರಂನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಭಿಮಾನಿಗಳು ತಿರುವನಂತಪುರಂನಲ್ಲಿರುವ ಫೆಡರಲ್ ಬ್ಯಾಂಕ್ ಶಾಖೆಯಲ್ಲಿರುವ ಅರುಂಧತಿಯ ಸಹೋದರಿ ಆರತಿ ಅವರ ಹೆಸರಿನಲ್ಲಿ ಈ ಖಾತೆಗೆ ದೇಣಿಗೆಯನ್ನು ವರ್ಗಾಯಿಸಲು ವಿನಂತಿಸಲಾಗಿದೆ.





