ಪಾಲಕ್ಕಾಡ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇರಳ-ತಮಿಳುನಾಡು ಗಡಿಯಲ್ಲಿ ಸಿಆರ್‍ಪಿಎಫ್ ಸಿಬ್ಬಂದಿಯಿಂದ ಭಾರೀ ತಪಾಸಣೆ ನಡೆಯುತ್ತಿದೆ.
ಕೇರಳ-ತಮಿಳುನಾಡು ಗಡಿಯಲ್ಲಿರುವ ಮಲಕಪ್ಪರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಪೋಲೀಸರು ಮತ್ತು ಸಿಆರ್‍ಪಿಎಫ್ ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಣದ ಹೊಳೆ ತಡೆಯಲು ಪರಿಶೀಲನೆ ನಡೆಸಲಾಗುತ್ತಿದೆ.
ಮಲಕಪ್ಪರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಚುನಾವಣೆ ಅಂಗವಾಗಿ ಅಕ್ರಮವಾಗಿ ಹಣ, ಮಾದಕ ದ್ರವ್ಯ ಸಾಗಾಟ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ವರದಿ ಆಧರಿಸಿ ತನಿಖೆ ನಡೆಸಲಾಗುತ್ತಿದೆ.
ಪೋಲೀಸರು, ಅರಣ್ಯ ಇಲಾಖೆ, ಚುನಾವಣಾ ವಿಶೇಷ ದಳ ಹಾಗೂ ಸ್ಥಾಯೀ ಕಣ್ಗಾವಲು ತಂಡದ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ವಿಶೇಷ ಭದ್ರತೆ ಒದಗಿಸಲು ಸಿಆರ್‍ಪಿಎಫ್‍ಗೂ ವಹಿಸಲಾಗಿದೆ. ಚುನಾವಣೆ ಮುಗಿಯುವವರೆಗೂ ಗಡಿ ಪ್ರದೇಶಗಳಲ್ಲಿ ತಪಾಸಣೆ ಮುಂದುವರಿಯಲಿದೆ ಎಂದು ಸಿಆರ್‍ಪಿಎಫ್ ತಿಳಿಸಿದೆ.





