ಕಣ್ಣೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜೀವವನ್ನೇ ಪಣಕ್ಕಿಟ್ಟರೂ ಸೋಲಿಸಲಾಗುವುದು ಎಂದು ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ವಿ.ಕೆ.ಸನೋಜ್ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಆಗಮಿಸಿರುವ ನಿರಾಶ್ರಿತರಿಗೆ ಪೌರತ್ವ ನೀಡುವುದನ್ನು ವಿರೋಧಿಸುತ್ತೇವೆ ಎಂಬುದು ಡಿವೈಎಫ್‍ಐ ನಿಲುವು.
ಮೋದಿ ವಿರುದ್ದ ಯುವಜನ ಧರಣಿ ಆರಂಭಿಸಲಿದ್ದು, ಡಿವೈಎಫ್‍ಐ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ. ಇಡೀ ಬ್ಲಾಕ್ ಕೇಂದ್ರದಲ್ಲಿ ರಾತ್ರಿ ಮೆರವಣಿಗೆ ನಡೆಸಲಾಗುವುದು. ಜ್ಯೋತಿ ಬೆಳಗಿಸಿ ಪ್ರತಿಭಟನೆ ನಡೆಸಲಿದೆ. ಈ ಕಾನೂನು ವಿರುದ್ಧ ತಮ್ಮ ಪ್ರಬಲ ಹೋರಾಟವನ್ನು ಮುಂದುವರೆಸುವುದಾಗಿ ವಿ.ಕೆ.ಸನೋಜ್ ಅವರು ತಿಳಿಸಿದರು.





