ಕಾಸರಗೋಡು : ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಲು ಶಿಕ್ಷಣ ಮತ್ತು ಉದ್ಯೋಗದಲ್ಲಿ ಭಾರತೀಯ ಭಾಷೆಗಳನ್ನು ಮರುಸ್ಥಾಪಿಸುವುದು ಅನಿವಾರ್ಯ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿ ಪ್ರೊ.ಕೆ.ಸಿ. ಬೈಜು ತಿಳಿಸಿದ್ದಾರೆ.
ಅವರು ಕೇಂದ್ರೀಯ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರ ವಿಭಾಗ, ಭಾರತೀಯ ಭಾಷಾ ಸಮಿತಿ ಹಾಗೂ ಶಿಕ್ಷಣ ಅಭಿವೃದ್ಧಿ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ ಭಾರತೀಯ ಭಾಷಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ಕøಷ್ಟ ಶಿಕ್ಷಣದಿಂದ ಮಾತ್ರ ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯ. ಸಮಾಜದಲ್ಲಿ ತಳಮಟ್ಟದಲ್ಲಿರುವವರನ್ನು ಪರಿಗಣಿಸದೆ ದೇಶದಲ್ಲಿ ಸ್ರೈಕ್ಷಣಿಕ ಉನ್ನತಿಪಡೆಯಲು ಸಾಧ್ಯವಿಲ್ಲ. ಮಾತೃಭಾಷೆಯ ಮೂಲಕ ಲಭಿಸುವ ಶಿಕ್ಷಣವು ವೈಜ್ಞಾನಿಕ ವಿಧಾನ ಮತ್ತು ಸಾಮಾಜಿಕ ಪ್ರಗತಿಯ ಆಧಾರವಾಗಿದೆ. ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಭಾರತೀಯ ಭಾಷೆಗಳು ಪ್ರವರ್ಧಮಾನಕ್ಕೆ ಬರುವ ರೀತಿಯಲ್ಲಿ ಸನ್ನಿವೇಶ ಅಭಿವೃದ್ಧಿಪಡಿಸಬೇಕು ಎಂದು ಅವರು ತಿಳಿಸಿದರು.
ಡಾ. ಎಸ್. ತೆನ್ನರಸು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಮೇಲ್ವಿಚಾರಣಾ ಸಮಿತಿ ಸದಸ್ಯ ಎ. ವಿನೋದ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಭಾರತೀಯ ಭಾಷೆಗಳಲ್ಲಿ ವಿಷಯವನ್ನು ರಚಿಸಲು ಮತ್ತು ತಂತ್ರಜ್ಞಾನದೊಂದಿಗೆ ಸಂಪರ್ಕ ಸಾಧಿಸಲು ಕೇಂದ್ರ ಸರ್ಕಾರ ಮತ್ತು ಶೈಕ್ಷಣಿಕ ಏಜೆನ್ಸಿಗಳು ಪ್ರಯತ್ನ ನಡೆಸುತ್ತಿರುವುದಾಘಿ ತಿಳಿಸಿದರು. ಡಾ. ಜಿ. ಪಳನಿ ರಾಜನ್ ಸ್ವಾಗತಿಸಿದರು. ಡಾ. ಸ್ಯಾಮ್ ಗೈ ಚಿಂಗ್ ವಂದಿಸಿದರು.
ವಿವಿಧ ಅಧಿವೇಶನಗಳಲ್ಲಿ, ಪೆÇ್ರ. ಅಚ್ಯುತ ಶಂಕರ್ ಎಸ್ ನಾಯರ್, ಪೆÇ್ರ. ಮುಹಮ್ಮದುನ್ನಿ ಇಲಿಯಾಸ್ ಮುಸ್ತಫಾ, ಡಾ. ಶಿವಪ್ರಸಾದ್, ಡಾ. ತ್ಯಾಗು, ಡಾ. ಸೌಮ್ಯಾ, ಡಾ. ಪಿ. ಶ್ರೀಕುಮಾರ್, ಡಾ. ಗಿರೀಶ ಭಟ್ ಅಜಕಲ ಮೊದಲಾದವರು ಮಾತನಾಡಿದರು.




