HEALTH TIPS

ರೋಟರಿ ಕ್ಲಬ್ ಬದಿಯಡ್ಕ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ:ಸೂಲಗಿತ್ತಿಗೆ ಸನ್ಮಾನ

               ಬದಿಯಡ್ಕ: ಬದಿಯಡ್ಕದ ರೋಟರಿ ಕ್ಲಬ್ ನೇತೃತ್ವದಲ್ಲಿ ರೋಟರಿ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಿತು.

                  ರೋಟರಿ ಅಧ್ಯಕ್ಷ ಬಿ.ರಾಧಾಕೃಷ್ಣ ಪೈ ಯವರ ನೇತೃತ್ವದಲ್ಲಿ ಕನಕಪ್ಪಾಡಿಯಲ್ಲಿರುವ ಸೂಲಗಿತ್ತಿ ಸುಬ್ಬಕ್ಕ ಯಾನೆ ಸುಬ್ಬಿಯವರ ನಿವಾಸಕ್ಕೆ ಭೇಟಿ ನೀಡಿ ಪ್ರಶಸ್ತಿ ಫಲಕ, ಫಲವಸ್ತುಗಳು ಹಾಗೂ ನಗದು ಹಣವನ್ನು ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ರೋಟರಿ ಬದಿಯಡ್ಕ ರೋಟರಿ ಕ್ಲಬ್ ಕಾರ್ಯದರ್ಶಿ ವೈ. ರಾಘವೇಂದ್ರ ಪ್ರಸಾದ್ ನಾಯಕ್ ರವರು ಸನ್ಮಾನಿತರ ಕಿರು ಪರಿಚಯ ನೀಡಿ ಸ್ವಾಗತಿಸಿದರು. 

               ರೋಟರಿ ಅಧ್ಯಕ್ಷ ಬಿ. ರಾಧಾಕೃಷ್ಣ ಪೈಯವರು ವಿಶ್ವ ಮಹಿಳಾ ದಿನಾಚರಣೆಯ ಮಹತ್ವವನ್ನು ಮತ್ತು ಸನ್ಮಾನಿತರು ಬದಿಯಡ್ಕ ಪರಿಸರದಲ್ಲಿ ಸರಿಸುಮಾರು 70 ದಶಕಗಳಿಂದ  ಹಿರಿಯ ಸೂಲಗಿತ್ತಿಯಾಗಿ ತಾವು ಸಮಾಜಕ್ಕಾಗಿ ನಿಸ್ವಾರ್ಥ ಸೇವೆಗೈದ ಸುಬ್ಬಕ್ಕನವರನ್ನು ಗುಣಗಾನಗೈದು ಸನ್ಮಾನಿಸಿ ಕಾರ್ಯಕ್ರಮವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು.   

            ಸನ್ಮಾನವನ್ನು ಪ್ರೀತಿಯಿಂದ ಸ್ವೀಕರಿಸಿ  ಮಾತನ್ನಾಡಿದ ಸುಬ್ಬಕ್ಕ ಅವರು  ತಮ್ಮನ್ನು ಮೊತ್ತಮೊದಲಾಗಿ ಗೌರವಿಸಿದ ಬದಿಯಡ್ಕ ರೋಟರಿ ಕ್ಲಬ್ ನ ಸಾಮಾಜಿಕ ಕಳಕಳಿ ಹಾಗೂ ಸೇವಾಕಾರ್ಯಗಳನ್ನು ಮೆಚ್ಚಿ ಗೌರವಾರ್ಪಣೆಗಾಗಿ ಹಾಗೂ ಸಾಮಾಜಿಕ ಕಳಕಳಿಯನ್ನು ಮೆಚ್ಚಿ ಕೃತಜ್ಞತೆಯನ್ನು  ಸಲ್ಲಿಸಿದರು. ಸಮಾರಂಭದಲ್ಲಿ ಸನ್ಮಾಸಿತರ ಕುಟುಂಬ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries