ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸರ್ಕಾರಿ ನೌಕರನ ಹತ್ಯೆಯಲ್ಲಿ ನಿಷೇಧಿತ ಲಷ್ಕರ್-ಎ-ತಯಬಾ ಸಂಘಟನೆಯ ಅಬು ಹಮ್ಜಾ ಎಂಬ ಸಂಕೇತನಾಮದ ವಿದೇಶಿ ಉಗ್ರನ ಕೈವಾಡ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
0
samarasasudhi
ಏಪ್ರಿಲ್ 24, 2024
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸರ್ಕಾರಿ ನೌಕರನ ಹತ್ಯೆಯಲ್ಲಿ ನಿಷೇಧಿತ ಲಷ್ಕರ್-ಎ-ತಯಬಾ ಸಂಘಟನೆಯ ಅಬು ಹಮ್ಜಾ ಎಂಬ ಸಂಕೇತನಾಮದ ವಿದೇಶಿ ಉಗ್ರನ ಕೈವಾಡ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಉಗ್ರನ ಬಗ್ಗೆ ಸುಳಿವು ನೀಡಿದವರಿಗೆ ₹10 ಲಕ್ಷ ಇನಾಮು ಘೋಷಿಸಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ಮೊಹಮ್ಮದ್ ರಜಾಕ್ (40) ಅವರನ್ನು ಥಾನಮಂಡಿ ಪ್ರದೇಶದ ತಪ್ಪಲಿನ ಕುಂದಾ ಗ್ರಾಮದಲ್ಲಿ ಸೋಮವಾರ ಹತ್ಯೆಗೈಯಲಾಗಿತ್ತು. ರಜಾಕ್ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ನೆರವೇರಿಸಲಾಯಿತು.
ಇಬ್ಬರು ಉಗ್ರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ರಜಾಕ್ ಅವರ ಸಹೋದರ ಮೊಹಮ್ಮದ್ ತಾಹೀರ್ ಚೌಧರಿ ಯೋಧರಾಗಿದ್ದು, ದಾಳಿಯಿಂದ ಪಾರಾಗಿದ್ದಾರೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.
ಥಾನಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.