ನವದೆಹಲಿ: ಯೋಧರು, ಸಶಸ್ತ್ರ ಪಡೆಗಳ ಸಿಬ್ಬಂದಿಗಾಗಿ ಕಠಿಣ ಸಂದರ್ಭಗಳಲ್ಲಿ ಬಳಸಲು ಸುರಕ್ಷಿತ ಮತ್ತು ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯು (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
0
samarasasudhi
ಏಪ್ರಿಲ್ 24, 2024
ನವದೆಹಲಿ: ಯೋಧರು, ಸಶಸ್ತ್ರ ಪಡೆಗಳ ಸಿಬ್ಬಂದಿಗಾಗಿ ಕಠಿಣ ಸಂದರ್ಭಗಳಲ್ಲಿ ಬಳಸಲು ಸುರಕ್ಷಿತ ಮತ್ತು ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯು (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಹೊಸ ವಿನ್ಯಾಸದಿಂದ ಕೂಡಿರುವ ಈ ಜಾಕೆಟ್ ದೇಶದಲ್ಲಿಯೇ ಅತ್ಯಂತ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಆಗಿದೆ. ಈಚೆಗೆ ಈ ಜಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ಸಚಿವಾಲಯ ಹೇಳಿದೆ.
ಈ ಜಾಕೆಟ್‌ನ ಮುಂಭಾಗದ ಹಾರ್ಡ್ ಆರ್ಮರ್ ಪ್ಯಾನೆಲ್ (ಎಚ್‌ಎಪಿ) ಅನ್ನು ಪಾಲಿಮರ್ ಬ್ಯಾಕಿಂಗ್‌ನೊಂದಿಗೆ ಏಕಶಿಲೆಯ ಸೆರಾಮಿಕ್ ಪ್ಲೇಟ್‌ನಿಂದ ವಿನ್ಯಾಸಗೊಳಿಸಲಾಗಿದೆ. ಇದು ಕಾರ್ಯಾಚರಣೆ ಸಂದರ್ಭದಲ್ಲಿ ಗುಂಡಿನ ದಾಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಜತೆಗೆ ಜಾಕೆಟ್‌ನಲ್ಲಿ ಇರುವ ಬಿಗಿ ನೇಯ್ಗೆಯು ಗುಂಡು ಒಳಗೆ ನುಗ್ಗದಂತೆ ನೋಡಿಕೊಳ್ಳುತ್ತದೆ ಎಂದು ಸಚಿವಾಲಯ ವಿವರಿಸಿದೆ.