HEALTH TIPS

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

                       ಕೊಹಿಮಾ: ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶುಕ್ರವಾರ ಚುನಾವಣೆ ಬಹಿಷ್ಕರಿಸಲಾಗಿದೆ.

                   ಪೂರ್ವ ನಾಗಾಲ್ಯಾಂಡ್‌ನ ಈ ಜಿಲ್ಲೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ಈ ಪೈಕಿ ಯಾರೊಬ್ಬರೂ ಮತಗಟ್ಟೆಗಳತ್ತ ಸುಳಿಯಲ್ಲೇ ಇಲ್ಲ.

                   ಇದರಿಂದಾಗಿ ಸತತ 9 ಗಂಟೆಗಳ ಕಾಲ ಮತಗಟ್ಟೆಗಳಲ್ಲಿ ಕಾದಿದ್ದ ಚುನಾವಣಾ ಸಿಬ್ಬಂದಿ ನಿರಾಸೆ ಅನುಭವಿಸಿದ್ದಾರೆ.

                   ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರಿಸುವವರೆಗೂ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವ ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್‌ಪಿಒ) ಮುಖಂಡರು ಈಚೆಗೆ ತಿಳಿಸಿದ್ದರು.

                    ಇಎನ್‌ಪಿಒ ತಮ್ಮ ಪ್ರಾಂತ್ಯದ 20 ಶಾಸಕರು ಮತ್ತು ಏಕೈಕ ಸಂಸದರೊಂದಿಗೆ ತುಯೆನ್ಸಾಂಗ್‌ನಲ್ಲಿ ಗುಪ್ತ ಸಭೆ ನಡೆಸಿತ್ತು.

                   'ಗಡಿ ನಾಗಾಲ್ಯಾಂಡ್ (ಫ್ರಾಂಟಿಯರ್ ನಾಗಾಲ್ಯಾಂಡ್‌) ಪ್ರಾಂತ್ಯದ ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರವು ಈಡೇರಿಸುವವರೆಗೆ ಲೋಕಸಭಾ ಚುನಾವಣೆಯಿಂದ ದೂರ ಉಳಿಯಲು ಮತ್ತು ತಮ್ಮ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಅವಕಾಶ ನೀಡದಿರಲು ತೀರ್ಮಾನಿಸಿದ್ದೇವೆ' ಎಂದು ಇಎನ್‌ಪಿಒ ಉಪಾಧ್ಯಕ್ಷ ಡಬ್ಲ್ಯು.ಬೆಂಡಾಂಗ್ ಚಾಂಗ್ ಪಿಟಿಐಗೆ ತಿಳಿಸಿದ್ದರು.

                    ಏಳು ನಾಗಾ ಬುಡಕಟ್ಟುಗಳ ಸಂಘಟನೆಯಾಗಿರುವ ಇಎನ್‌ಪಿಒ ಪೂರ್ವ ನಾಗಾಲ್ಯಾಂಡ್‌ನ ಆರು ಜಿಲ್ಲೆಗಳನ್ನೊಳಗೊಂಡಂತೆ ಪ್ರತ್ಯೇಕ ರಾಜ್ಯದ ಸ್ಥಾಪನೆಗಾಗಿ 2010ರಿಂದಲೂ ಹೋರಾಡುತ್ತಿದೆ.

                   ಈ ಬಾರಿಯ ಲೋಕಸಭಾ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಇಂದು (ಶುಕ್ರವಾರ) 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries