HEALTH TIPS

ನೀತಿ ಸಂಹಿತೆ ಉಲ್ಲಂಘನೆ: ಎರಡು ಲಕ್ಷಕ್ಕೂ ಅಧಿಕ ದೂರುಗಳ ಮೇಲೆ ಕ್ರಮ : ಇಸಿ

              ತಿರುವನಂತಪುರಂ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರುಗಳ ವರದಿಗಾಗಿ ಆಯೋಗ ಸ್ಥಾಪಿಸಿರುವ ಸಿ ವಿಜಿಲ್ ಮೊಬೈಲ್ ಆ್ಯಪ್ ಮೂಲಕ ರಾಜ್ಯದಲ್ಲಿ ಈವರೆಗೆ 2,06,152 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ಮಾಹಿತಿ ನೀಡಿದ್ದಾರೆ.

             ಮಾರ್ಚ್ 16 ರಿಂದ ಏಪ್ರಿಲ್ 20 ರವರೆಗೆ ಒಟ್ಟು 2,09,661 ದೂರುಗಳು ಆ್ಯಪ್ ಮೂಲಕ ಬಂದಿವೆ. 426 ದೂರುಗಳ ಮೇಲೆ ಕ್ರಮ ಪ್ರಗತಿಯಲ್ಲಿದೆ.

               ಅನಧಿಕೃತ ಭಿತ್ತಿಪತ್ರಗಳು, ಬ್ಯಾನರ್‍ಗಳು, ಬೋರ್ಡ್‍ಗಳು, ಗೋಡೆ ಬರಹಗಳು, ಕಡ್ಡಾಯ ಮಾಹಿತಿ ಇಲ್ಲದ ಪೋಸ್ಟರ್‍ಗಳು, ಆಸ್ತಿ ವಿರೂಪ, ಅಕ್ರಮ ಹಣ ವರ್ಗಾವಣೆ, ಅನುಮತಿಯಿಲ್ಲದೆ ವಾಹನ ಬಳಕೆ, ಮದ್ಯ ವಿತರಣೆ, ಉಡುಗೊರೆ ನೀಡುವುದು, ಶಸ್ತ್ರಾಸ್ತ್ರಗಳ ಪ್ರದರ್ಶನ, ದ್ವೇಷಪೂರಿತ ಭಾಷಣ ಇತ್ಯಾದಿ ದೂರುಗಳನ್ನು ಸಿ ವಿಜಲ್ ಮೂಲಕ ಸ್ವೀಕರಿಸಲಾಗಿದೆ. 

             ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಸಾರ್ವಜನಿಕ ದೂರುಗಳನ್ನು ಸಿ ವಿಜಿಲ್ (ನಾಗರಿಕರ ಜಾಗರಣೆ) ಅಪ್ಲಿಕೇಶನ್ ಮೂಲಕ ಕಳುಹಿಸಬಹುದು. ಆ್ಯಪ್ ಮೂಲಕ ಕಳುಹಿಸಲಾದ ದೂರುಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಆಯುಧಗಳನ್ನು ಒಯ್ಯುವುದು, ಬೆದರಿಕೆ ಹಾಕುವುದು, ಉಡುಗೊರೆ ಹಂಚುವುದು, ಮದ್ಯ ಹಂಚುವುದು, ಹಣ ಹಂಚುವುದು ಮತ್ತು ಪೇಯ್ಡ್ ನ್ಯೂಸ್ ಕೂಡ ವರದಿ ಮಾಡಬಹುದು. ದೂರುದಾರರ ಗುರುತನ್ನು ಗೌಪ್ಯವಾಗಿಡಲಾಗುವುದು.                ಉಲ್ಲಂಘನೆ ನಡೆದ ಸ್ಥಳದಲ್ಲಿ ನೇರವಾಗಿ ತೆಗೆದ ಚಿತ್ರಗಳನ್ನು ಮಾತ್ರ ಆ್ಯಪ್ ಮೂಲಕ ಕಳುಹಿಸಬಹುದು. ಬೇರೆಯವರು ತೆಗೆದ ಚಿತ್ರಗಳನ್ನು ಕಳುಹಿಸಲು ಸಾಧ್ಯವಿಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries