ವಯನಾಡ್: ಕಾಂಗ್ರೆಸ್‌ನ ವಯನಾಡ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಎಂ. ಸುಧಾಕರನ್ ಅವರು ಶನಿವಾರ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
0
samarasasudhi
ಏಪ್ರಿಲ್ 21, 2024
ವಯನಾಡ್: ಕಾಂಗ್ರೆಸ್‌ನ ವಯನಾಡ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಎಂ. ಸುಧಾಕರನ್ ಅವರು ಶನಿವಾರ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಬಳಿಕ ಮಾತನಾಡಿದ ಅವರು, 'ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಪಕ್ಷದ ಜಿಲ್ಲಾ ಮುಖಂಡರಿಗೂ ಲಭ್ಯರಿರಲಿಲ್ಲ.
ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ರಾಹುಲ್ ಅವರು ಘೋಷಿಸಲಿ ಎಂದೂ ಸವಾಲು ಹಾಕಿದರು.
ಇತರ ಇಬ್ಬರು ಪ್ರಮುಖ ನಾಯಕರೂ ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದರು. ವಯನಾಡ್‌ನಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ.