HEALTH TIPS

ವಿದ್ಯುನ್ಮಾನ ಮತಯಂತ್ರ ಮೋಸ ಎಂಬ ಸುದ್ದಿ ಹಬ್ಬಿಸುವವರೇ, ಜಾಗ್ರತೆ: ಕೇರಳ ಪೋಲೀಸ್

             ತಿರುವನಂತಪುರಂ: ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಪ್ರಚಾರಗಳನ್ನು ತಡೆಯಲು ಕೇರಳ ಪೋಲೀಸರು. ‘ವಿದ್ಯುನ್ಮಾನ ಮತಯಂತ್ರದಲ್ಲಿ ವಂಚನೆಯಾಗಿದೆ’ ಎಂಬ ನಕಲಿ ಪ್ರಚಾರಕ್ಕಾಗಿ ರಾಜ್ಯದಲ್ಲಿ 12 ಪ್ರಕರಣಗಳು ದಾಖಲಾಗಿವೆ ಎಂದು ಪೋಲೀಸರು ತಿಳಿಸಿದ್ದಾರೆ. ಸಮಾಜದಲ್ಲಿ ಒಡಕು, ಪೈಪೋಟಿ, ಘರ್ಷಣೆ, ದ್ವೇಷ ಹುಟ್ಟು ಹಾಕುವ ಉದ್ದೇಶದಿಂದ, ಸಾರ್ವಜನಿಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಸುದ್ದಿ ಹಬ್ಬಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.

          ಲೋಕಸಭೆ ಚುನಾವಣೆಗೆ ಸಂಬಂಧಿಸಿದ ನಕಲಿ ಪ್ರಚಾರಗಳನ್ನು ತಡೆಗಟ್ಟಲು ಸಾಮಾಜಿಕ ಮಾಧ್ಯಮ ನಿಗಾ ತಂಡಗಳನ್ನು ರಚಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಮತ್ತು ವಿವಿಧ ವ್ಯಾಪ್ತಿ ಮತ್ತು ಜಿಲ್ಲೆಗಳಲ್ಲಿ ಮಾನಿಟರಿಂಗ್ ತಂಡಗಳನ್ನು ರಚಿಸಲಾಗಿದೆ.

   ಕೇರಳ ಪೋಲೀಸರ ಫೇಸ್ ಬುಕ್ ಪೋಸ್ಟ್:

      ವಿದ್ಯುನ್ಮಾನ ಮತಯಂತ್ರದಲ್ಲಿ ಮೋಸವಿದೆ ಎಂಬ ಸುಳ್ಳು ಪ್ರಚಾರಕ್ಕಾಗಿ ರಾಜ್ಯದಲ್ಲಿ 12 ಪ್ರಕರಣಗಳು ದಾಖಲಾಗಿವೆ. ಮಲಪ್ಪುರಂ, ಎರ್ನಾಕುಳಂ ನಗರ ಮತ್ತು ತ್ರಿಶೂರ್ ನಗರದಲ್ಲಿ ತಲಾ ಎರಡು ಮತ್ತು ತಿರುವನಂತಪುರಂ ಗ್ರಾಮಾಂತರ, ಕೊಲ್ಲಂ ನಗರ, ಪತ್ತನಂತಿಟ್ಟ, ಆಲಪ್ಪುಳ, ಪಾಲಕ್ಕಾಡ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಿ ಸಮಾಜದಲ್ಲಿ ಒಡಕು, ಪೈಪೋಟಿ, ಘರ್ಷಣೆ, ದ್ವೇಷ ಹುಟ್ಟುಹಾಕುವ ಹುನ್ನಾರಗಳಿಗಾಗಿ ಪ್ರಕರಣ ದಾಖಲಾಗಿದೆ.

         ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡಲು ರಾಜ್ಯ ಮಟ್ಟ, ವಿವಿಧ ವ್ಯಾಪ್ತಿಗಳು ಮತ್ತು ಜಿಲ್ಲೆಗಳಲ್ಲಿ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಸ್ತು ತೀವ್ರಗೊಳಿಸಿವೆ.

         ಈ ಕೆಳಗಿನ ವಾಟ್ಸ್ ಆಫ್ ಸಂಖ್ಯೆಗಳ ಮೂಲಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಸಾಮಾಜಿಕ ಮಾಧ್ಯಮ ಸಂವಹನಗಳ ಕುರಿತು ಪೋಲೀಸ್ ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ತಂಡಗಳಿಗೆ ತಿಳಿಸಬಹುದು.

ಸೈಬರ್ ಪ್ರಧಾನ ಕಛೇರಿ - 9497942700

ತಿರುವನಂತಪುರಂ ನಗರ - 9497942701

ತಿರುವನಂತಪುರಂ ಗ್ರಾಮಾಂತರ - 9497942715

ಕೊಲ್ಲಂ ನಗರ - 9497942702

ಕೊಲ್ಲಂ ಗ್ರಾಮಾಂತರ - 9497942716

ಪತ್ತನಂತಿಟ್ಟ - 9497942703

ಆಲಪ್ಪುಳ - 9497942704

ಕೊಟ್ಟಾಯಂ - 9497942705

ಇಡುಕ್ಕಿ - 9497942706

ಎರ್ನಾಕುಳಂ ನಗರ - 9497942707

ಎರ್ನಾಕುಳಂ ಗ್ರಾಮಾಂತರ - 9497942717

ತ್ರಿಶೂರ್ ನಗರ - 9497942708

ತ್ರಿಶೂರ್ ಗ್ರಾಮಾಂತರ - 9497942718

ಪಾಲಕ್ಕಾಡ್ - 9497942709

ಮಲಪ್ಪುರಂ - 9497942710

ಕೋಝಿಕ್ಕೋಡ್ ನಗರ - 9497942711

ಕೋಝಿಕ್ಕೋಡ್ ಗ್ರಾಮಾಂತರ - 9497942719

ವಯನಾಡ್ - 9497942712

ಕಣ್ಣೂರು ನಗರ - 9497942713

ಕಣ್ಣೂರು ಗ್ರಾಮಾಂತರ - 9497942720

ಕಾಸರಗೋಡು - 9497942714

ತಿರುವನಂತಪುರಂ ವಲಯ - 9497942721

ಎರ್ನಾಕುಳಂ ವಲಯ - 9497942722

ತ್ರಿಶೂರ್ ವಲಯ- 9497942723

ಕಣ್ಣೂರು ವಲಯ- 9497942724



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries