HEALTH TIPS

ಪುಟ್ಟ ಬಾಲೆ ಸನ್ನಿಧಿಯಿಂದ ಕಾಸರಗೋಡಿನಲ್ಲಿ ಮತದಾನ ಜಾಗೃತಿ- ಐದು ಭಾಷೆಗಳೊಂದಿಗೆ ಮತದಾನದ ಉದ್ದೇಶ ತಿಳಿಸುತ್ತಿರುವ ಪೋರಿ!

                 ಕಾಸರಗೋಡು: ದೇಶ ಲೋಕಸಭಾ ಚುನವಣೆಯ ಕಾವಿನಲ್ಲಿದ್ದರೆ, ಇಲ್ಲೊಬ್ಬಳು ಪುಟ್ಟ ಬಾಲಕಿ ಮತದಾನ ನಡೆಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತಳಾಗಿದ್ದಾಳೆ. ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ, ಕಶೆಕೋಡಿ ನಿವಾಸಿ ಲೋಕೇಶ್ ಅವರ ಪುತ್ರಿ ಸನ್ನಿಧಿ ಈ ಮಹತ್ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ.

         ಕಳೆದ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಸನ್ನಿಧಿ ಈ ಬಾರಿ ಐದು ಭಾಷೆಗಳೊಂದಿಗೆ ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದಾಳೆ. ತುಳು, ಕನ್ನಡ, ಇಂಗ್ಲಿಷ್, ಕೊಂಕಣಿ ಜತೆಗೆ ಮಲಯಾಳ ಭಾಷೆಯಲ್ಲೂ ಮತದನ ಜಾಗೃತಿ ನಡೆಸುತ್ತಿದ್ದಾಳೆ. ಕಾಸರಗೋಡು ಜಿಲ್ಲೆಗೆ ಸೋಮವಾರ ಭೇಟಿ ನೀಡಿದ ಸನ್ನಿಧಿ, ಮಂಜೇಶ್ವರ, ಕುಂಬಳೆಯ ವಿವಿಧೆಡೆ ಮನೆ, ಅಂಗಡಿ, ಕಚೇರಿ, ಹೋಟೆಲ್, ಆಟೋ ನಿಲ್ದಾಣ, ಲಾಟರಿ ಸ್ಟಾಲ್ ಸೇರಿದಂತೆ ವಿವಿಧ ಸಮುದಾಯದ ಜನರನ್ನು ಭೇಟಿಮಾಡಿ ಕಡ್ಡಾಯವಾಗಿ ಮತದಾನ ಮಾಡುವ ಉದ್ದೇಶದ ಬಗ್ಗೆ ತೊದಲು ಮಾತುಗಳ ಮೂಲಕ ತನ್ನದೇ ಧಾಟಿಯಲ್ಲಿ ಮನದಟ್ಟುಮಾಡಿಕೊಡುತ್ತಿದ್ದಾಳೆ. 

               ತಂದೆ ಲೋಕೇಶ್, ತಾಯಿ ಲೀಲಾವತಿ, ಸಹೋದರಿ ಸಮೃದ್ಧಿ ಸಹಕಾರದೊಂದಿಗೆ ಕೊಂಕಣಿ, ಮಲಯಾಳ ಭಾಷೆಯನ್ನೂ ಕರಗತಮಾಡಿಕೊಂಡಿರುವ ಸನ್ನಿಧಿ, ಕಾಸರಗೋಡು ಹಾಗೂ ಕಾಞಗಾಡಿನ ವಿವಿಧೆಡೆ ತೆರಳಿ ಮಲಯಾಳ ಣಾಷೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಳೆ. 

            ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ತನ್ನ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲುವಂತೆ ಕೋರಿಕೊಂಡಿದ್ದ ಪುಟ್ಟ ಬಾಲೆ ಸನ್ನಿದಿಯü ಪ್ರಸ್ತಾವನೆಗೆ ಕೇಂದ್ರ ಚುನಾವಣಾ ಆಯೋಗವೂ ಪ್ರಶಂಸೆ ವ್ಯಕ್ತಪಡಿಸಿದೆ. ಜತೆಗೆ ಸನ್ನಿಧಿ ಕಳುಹಿಸಿರುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ ಜಿಲ್ಲಾಧಿಕಾರಿಗೆ ಸೂಚನೆಯನ್ನೂ ನೀಡಿತ್ತು. ಯಾವುದೇ ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳ ಪರವಾಗಿರದೆ ತಟಸ್ಥವಾಗಿರುವ, ಕೇವಲ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಪೂರ್ಣ ರೀತಿಯ ಸಹಕಾರ ನೀಡುವಂತೆ ಈಗಾಗಲೇ ಚುನಾವಣಾ ಆಯೋಗವೂ ಸಂಬಂಧಪಟ್ಟ ಅಧಿಖಾರಿಗಳಿಗೆ ಸೂಚನೆ ನೀಡಿದೆ.


ಮೂರು ರಾಜ್ಯಗಳಲ್ಲಿ ಅಭಿಯಾನ:

           ಈಗಾಗಲೇ ಕರ್ನಾಟಕದಲ್ಲಿ ಯಶಸ್ವೀ ಅಬಿಯಾನ ಪೂರ್ತಿಗೊಳಿಸಿರುವ ಸನ್ನಿಧಿ, ಕೇರಳದಲ್ಲಿ ಮತದಾನ ಜಾಗೃತಿ ಕಾರ್ಯ ನಡೆಸುತ್ತಿದ್ದಾಲೆ. ಮುಂದೆ ಗೋವಾ ರಾಜ್ಯಕ್ಕೆ ತೆರಳಿ ಮತದಾನ ಜಾಗೃತಿ ಕಾರ್ಯ ನಡೆಸಲು ಸನ್ನಿಧಿ ತೀರ್ಮಾನಿಸಿದ್ದಾಳೆ. ಇದಕ್ಕಾಗಿ ಮಲಯಾಳ ಮತ್ತು ಕೊಂಕಣಿ ಭಾಷೆಯನ್ನು ವಿಶೇಷ ಪ್ರಯತ್ನದಿಂದ ಕರಗತಮಾಡಿಕೊಂಡಿದ್ದಾಳೆ.

ಜಿಲ್ಲಾಧಿಕಾರಿ ಪ್ರಶಂಸೆ:

           ಕಾಸರಗೋಡು ಸಿವಿಲ್ ಸ್ಟೇಶನ್‍ನ ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಭೇಟಿ ನೀಡಿದ ಸನ್ನಿಧಿಯನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಹಾಗೂ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕ್ಕರ ಆತ್ಮೀಯವಾಗಿ ಬರಮಾಡಿಕೊಂಡರು.

          'ನಮಸ್ಕಾರ, ನಾನಿಂದು ಓಟು ಕೇಳಲು ಬಂದಿಲ್ಲ,  ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಭಾಗವಹಿಸಬೇಕು. ಈ ಮೂಲಕ ದೇಶಕ್ಕೆ ಉತ್ತಮ ನೇತಾರರನ್ನು ಆಯ್ಕೆ ಮಾಡಿ ಕಳುಹಿಸಬೆಕು. ಇದಕ್ಕಾಗಿ ಪ್ರತಿಯೊಬ್ಬ ಕಡ್ಡಾಯವಾಗಿ ಮತ ಚಲಾಯಿಸಬೆಕು'ಎಂಬುದಾಗಿ ಸನ್ನಿಧಿ ತೊದಲು ನುಡಿಯೊಂದಿಗೆ ಮಲಯಾಳದಲ್ಲಿ ತನ್ನ ಜಾಗೃತಿ ಸಂದೇಶ ನೀಡಿದಳು. ಪುಟ್ಟ ಬಾಲಕಿ ಮತದಾನದ ಬಗ್ಗೆ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮದ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries