HEALTH TIPS

ಲೋಕ ಸಮರ: ಮನೆಯಲ್ಲಿ ಮಾತ್ರವಲ್ಲ ಲೋಕಸಭೆಯಲ್ಲಿ ಜೊತೆಗಿದ್ದವರು

               ಇಂದಿರಾ, ಸೋನಿಯಾ, ಮೇನಕಾ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಿಗಳಾಗಿ  ಸಂಸತ್ ಸದಸ್ಯರಾದವರು. ಅವರ ಗಂಡಂದಿರೂ ಲೋಕಸಭೆಯ ಸದಸ್ಯರಾಗಿದ್ದರು.

                ಲೋಕಸಭೆಯಲ್ಲಿ ತಮ್ಮ ಗಂಡಂದಿರೊಂದಿಗೆ ಒಟ್ಟಿಗೆ ಇರಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಅಂತಹ ಭಾಗ್ಯ ಲಭಿಸಿದ ಐದು ಜೋಡಿಗಳಿವೆ. ಅವರಲ್ಲಿ ಎರಡು ಜೋಡಿಗಳು ಕೇರಳೀಯರದ್ದು.  ಇವರಲ್ಲದೆ ರಾಜ್ಯಸಭೆಯಲ್ಲಿ ಒಗ್ಗೂಡಿ ಏಕಕಾಲಕ್ಕೆ ರಾಜ್ಯಸಭೆ, ಲೋಕಸಭೆ ಎರಡರಲ್ಲೂ ಸಂಸದರಾಗಿದ್ದವರೂ ಇದ್ದಾರೆ.

           ಲೋಕಸಭೆಯಲ್ಲಿ ಕೇರಳೀಯ ಮೊದಲ ಜೋಡಿಗಳು 1967ರಲ್ಲಿ ಎ.ಕೆ. ಗೋಪಾಲನ್ ಪಾಲಕ್ಕಾಡ್‍ನಿಂದ ಮತ್ತು ಅವರ ಪತ್ನಿ ಸುಶೀಲಾ ಗೋಪಾಲನ್ ಅಂಬಲಪುಳದಿಂದ ಗೆದ್ದು ಜೊತೆಯಾದವರು.  67ಕ್ಕೂ ಮುನ್ನ ಎಕೆಜಿ ಕಾಸರಗೋಡಿನಲ್ಲಿ ಮೂರು ಬಾರಿ ಹಾಗೂ ಕಣ್ಣೂರಿನ ವಿರುದ್ಧ ಒಮ್ಮೆ ಗೆದ್ದಿದ್ದರು. ಸುಶೀಲಾ ಕೂಡ ಎರಡು ಬಾರಿ ಸಂಸತ್ತಿಗೆ ಬಂದಿದ್ದರು. 1980 ಮತ್ತು 91ರಲ್ಲಿ ಎಕೆಜಿ ನಿಧನರಾದ ನಂತರ.

            1967ರಲ್ಲಿ ಎಕೆಜಿ ಜೋಡಿಗಳ ಜೊತೆ ಮತ್ತೊಂದು ಕೇರಳೀಯ ಜೋಡಿ ಕೂಡಾ ಸಂಸತ್ತಿಗೆ ಆಯ್ಕೆಯಾಗಿದ್ದರು. ಕೆ.ಕೆ. ನಾಯರ್ ಮತ್ತು ಅವರ ಪತ್ನಿ ಶಕುಂತಲಾ ನಾಯರ್. ಇವರಿಬ್ಬರೂ ಉತ್ತರ ಪ್ರದೇಶದಿಂದ ಜನಸಂಘದ ಟಿಕೆಟ್‍ನಲ್ಲಿ ಗೆದ್ದಿದ್ದರು.  1952ರಲ್ಲೂ ಶಕುಂತಲಾ ಗೆದ್ದಿದ್ದರು. 62ರಲ್ಲಿ ಕೆ.ಕೆ. ನಾಯರ್ ಯುಪಿ ವಿಧಾನಸಭೆಯಲ್ಲೂ ಗೆದ್ದಿದ್ದಾರೆ. ಅಯೋಧ್ಯೆಯ ಇತಿಹಾಸದಲ್ಲಿ ಸ್ಥಾನ ಪಡೆದ ವ್ಯಕ್ತಿ ಕೆ.ಕೆ. ನಾಯರ್. ಅವರು ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್‍ನ ಕಲೆಕ್ಟರ್ ಮತ್ತು ಮ್ಯಾಜಿಸ್ಟ್ರೇಟ್ ಆಗಿದ್ದರು ಮತ್ತು ಅವರು ತೆಗೆದುಕೊಂಡ ಮಹತ್ತರ ನಿರ್ಧಾರ ವಿಗ್ರಹವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದುದು.  ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದಂಪತಿಗಳು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.

           ಪ್ರಮುಖ ಸಮಾಜವಾದಿ ನಾಯಕ, ಮಧು ದಂಡವತೆ ಅವರು 1971 ರಿಂದ 1901 ರವರೆಗೆ ಮಹಾರಾಷ್ಟ್ರದ ಕೊಂಕಣದ ರಾಜಾಪುರದಿಂದ ಸತತ ಐದು ಬಾರಿ ಗೆದ್ದರು. ಮೊರಾರ್ಜಿ ದೇಸಾಯಿ, ವಿ.ಪಿ. ಸಿಂಗ್ ಸಂಪುಟದ ಸದಸ್ಯರೂ ಆದರು. ಅವರ ಪತ್ನಿ ಪ್ರಮೀಳಾ ದಂಡವತೆ  1980 ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಮುಂಬೈ ಉತ್ತರ ಕೇಂದ್ರವನ್ನು ಪ್ರತಿನಿಧಿಸಿದ್ದರು.

            ಸತ್ಯೇಂದ್ರ ನಾರಾಯಣ ಸಿನ್ಹಾ ಮತ್ತು ಕಿಶೋರಿ ಸಿನ್ಹಾ ಲೋಕಸಭೆಯಲ್ಲಿ ಜೊತೆಯಾಗಿದ್ದ ಮತ್ತೊಂದು ಜೋಡಿ. 1952 ರಿಂದ, ಅವರು ಆರು ಅವಧಿಗೆ ಬಿಹಾರದ ಔರಂಗಾಬಾದ್‍ನಿಂದ ಸಂಸದರಾಗಿದ್ದರು. ಅವರ ಪತ್ನಿ ಕಿಶೋರಿ 1980 ಮತ್ತು 1984ರಲ್ಲಿ ವೈಶಾಲಿ ಕ್ಷೇತ್ರದಿಂದ ಸಂಸದರಾದರು. ಅವರ ಮಗ ನಿಖಿಲ್ ಕುಮಾರ್ ಕೇರಳದ ರಾಜ್ಯಪಾಲರಾಗಿದ್ದರು. ಅವರು ರಾಜ್ಯಪಾಲರಾಗುವ ಮೊದಲು ಮತ್ತು ನಂತರ ಲೋಕಸಭೆ ಪ್ರವೇಶಿಸಿದ್ದರು.

              2004 ರಲ್ಲಿ ಪಪ್ಪು ಯಾದವ್ ಮತ್ತು ಅವರ ಪತ್ನಿ ರಂಜಿತ್ ರಾಜನ್ ಒಟ್ಟಿಗೆ ಲೋಕಸಭೆ ಪ್ರವೇಶಿಸಿದರು. ಇಬ್ಬರೂ ಎರಡು ಪಕ್ಷಗಳಿಂದ ಸ್ಪರ್ಧಿಸಿದ್ದರು. ಪಪ್ಪು ಯಾದವ್ ಆರ್.ಜೆ.ಡಿ. ಮತ್ತು ರಂಜಿತ್ ರಾಜನ್ ಕಾಂಗ್ರೆಸ್ ನಿಂದ ಪ್ರತಿನಿಧಿಸಿದ್ದರು.

               ಜೋಕಿಮ್ ಆಳ್ವಾ ಮತ್ತು ವೈಲೆಟ್ ಆಳ್ವಾ ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಜೊತೆಗಿದ್ದ ಮೊದಲ ದಂಪತಿಗಳು.

             ರಾಜ್ಯಸಭೆಯ ಮೊದಲ ಮಹಿಳಾ ಉಪಸಭಾಪತಿ ವೈಲೆಟ್ ಆಳ್ವಾ ಅವರು 1952 ರಿಂದ 1969 ರವರೆಗೆ ಸದಸ್ಯರಾಗಿದ್ದರು. ಜೋಕಿಮ್ ಆಳ್ವ ಅವರು 1952 ರಿಂದ 1967 ರವರೆಗೆ ಲೋಕಸಭೆಯ ಸದಸ್ಯರಾಗಿದ್ದರು ಮತ್ತು 1968 ರಿಂದ 1974 ರವರೆಗೆ ರಾಜ್ಯಸಭೆಯಲ್ಲಿದ್ದರು. ಒಂದು ವಷರ್À ಇಬ್ಬರೂ ಒಟ್ಟಿಗೆ ರಾಜ್ಯಸಭೆಯಲ್ಲಿ, ಮತ್ತು ಹೆಂಡತಿ ಅಧ್ಯಕ್ಷರಾಗಿ, ಪತಿ ಕೇವಲ ಸದಸ್ಯರಾಗಿ.

            ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಅವರ ಪತಿ ಒಂದೇ ಸಮಯದಲ್ಲಿ ಸಂಸತ್ತಿನಲ್ಲಿದ್ದರು. ಲೋಕಸಭೆಯಲ್ಲಿ ಸುಷ್ಮಾ ಮತ್ತು ರಾಜ್ಯಸಭೆಯಲ್ಲಿ ಪತಿ ಸ್ವರಾಜ್ ಕೌಶಲ್. ಇಬ್ಬರೂ ಎರಡು ಪಕ್ಷದಲ್ಲಿದ್ದರು. ಸುಷ್ಮಾ ಬಿಜೆಪಿ. ಕೌಶಲ್ ಹರಿಯಾಣ ವಿಕಾಸ್ ಪಾರ್ಟಿದಿಂದ ಆಯ್ಕೆಯಾಗಿದ್ದರು. ಸುಷ್ಮಾ ಸ್ವರಾಜ್ ಕೇಂದ್ರ ಸಚಿವರಾಗಿದ್ದಾಗಲೇ ಅವರ ಪತಿ ಸದಸ್ಯರಾಗಿದ್ದರು ಎಂಬುದು ಕೂಡ ವಿಶೇಷ.

            2004ರಲ್ಲಿ ರಾಜಸ್ಥಾನದ ಬಿಕಾನೇರ್‍ನಿಂದ ಬಿಜೆಪಿ ಟಿಕೆಟ್‍ನಲ್ಲಿ ಧಮೇರ್ಂದ್ರ ಲೋಕಸಭೆ ಪ್ರವೇಶಿಸಿದಾಗ ಅವರ ಪತ್ನಿ ಹೇಮಾ ಮಾಲಿನಿ ನಾಮನಿರ್ದೇಶಿತ ಸದಸ್ಯೆಯಾಗಿ ರಾಜ್ಯಸಭೆಯಲ್ಲಿದ್ದರು. ನಂತರ ಚುನಾವಣೆ ಮೂಲಕ ರಾಜ್ಯಸಭೆಗೆ ಬಂದ ಹೇಮಾ ಮಾಲಿನಿ 2014ರಿಂದ ಬಿಜೆಪಿಯ ಲೋಕಸಭೆ ಸದಸ್ಯೆಯಾಗಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries