HEALTH TIPS

ಅಮೆರಿಕ: ಇಫ್ತಾರ್‌ ಕೂಟದ ಆಹ್ವಾನ ತಿರಸ್ಕರಿಸಿದ ಮುಸ್ಲಿಂ ಸಮುದಾಯ

                   ವಾಷಿಂಗ್ಟನ್‌ : ಇಫ್ತಾರ್‌ ಕೂಟಕ್ಕೆ ಶ್ವೇತ ಭವನ ನೀಡಿದ್ದ ಆಹ್ವಾನವನ್ನು ಅಮೆರಿಕದಲ್ಲಿರುವ ಮುಸ್ಲಿಂ ಸಮುದಾಯದ ಸದಸ್ಯರು ತಿರಸ್ಕರಿಸಿರುವುದು ವರದಿಯಾಗಿದೆ.

              'ಗಾಜಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಬೆಂಬಲ ನೀಡುತ್ತಿರುವುದನ್ನು ಖಂಡಿಸಿ ಮುಸ್ಲಿಂ ಸಮುದಾಯದ ಸದಸ್ಯರು ಈ ನಿರ್ಧಾರ ಕೈಗೊಂಡಿದ್ದಾರೆ' ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

               'ಇಸ್ರೇಲ್‌ಗೆ ಬೆಂಬಲ ನೀಡುತ್ತಿರುವುದರಿಂದ ಜೋ ಬೈಡನ್‌ ಅವರ ವಿರುದ್ಧ ಅನೇಕ ಆಹ್ವಾನಿತರು ಬೇಸರಗೊಂಡಿದ್ದಾರೆ. ಪ್ಯಾಲೆಸ್ಟೀನ್‌ನ ಜನರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಬೈಡನ್‌ ಅವರು ಮಂಗಳವಾರ ಸಂಜೆ ಆಯೋಜಿಸಿದ್ದ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿಲ್ಲ' ಎಂದು ಹಲವು ಆಹ್ವಾನಿತರು ಹೇಳಿದ್ದಾರೆ' ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ತಿಳಿಸಿದೆ.

            'ನೀವು ನೀಡುವ ಭೋಜನ ಸೇವಿಸುತ್ತ ಆಹಾರದ ಕೊರತೆಯಿಂದ ಮತ್ತು ಹಸಿವಿನಿಂದ ಸಾಯುವವರ ಕುರಿತು ಹೇಗೆ ಮಾತನಾಡುವುದು?' ಎಂದು ಅಮೆರಿಕದಲ್ಲಿ ನೆಲೆಸಿರುವ ಪ್ಯಾಲಿಸ್ಟೀನ್ ವೈದ್ಯ ಡಾ. ಥಾಯರ್‌ ಅಹ್ಮದ್‌ ಅವರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

                     ಥಾಯರ್‌ ಅವರು ಜನವರಿಯಲ್ಲಿ ಪ್ಯಾಲೆಸ್ಟೀನ್‌ನಲ್ಲಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries