HEALTH TIPS

Queen Of Skies: ಏರ್ ಇಂಡಿಯಾ ಬೋಯಿಂಗ್ 747 ಯುಗಾಂತ್ಯ: ಕೊನೆಯ ಬಾರಿ ಟೇಕ್ ಆಫ್; ವಿಮಾನಕ್ಕೆ ನೆಟ್ಟಿಗರು ಗುಡ್ ಬೈ!

        ಮುಂಬೈ: ಆಕಾಶದಲ್ಲಿ ಬರೊಬ್ಬರಿ 5 ದಶಕಗಳ ಕಾಲ ಮಹಾರಾಣಿಯಂತೆ ಮೆರೆದ ವಿಮಾನವೊಂದು ತನ್ನ ಹಾರಾಟವನ್ನು ನಿಲ್ಲಿಸಿದ್ದು, ಬೋಯಿಂಗ್ ಸಂಸ್ಥೆಯ B 747 ವಿಮಾನ ತನ್ನ ಹಾರಾಟವನ್ನು ಅಧಿಕೃತವಾಗಿ ನಿಲ್ಲಿಸಿದೆ.

             ಒಂದು ಕಾಲದಲ್ಲಿ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಯಂತಹ ವಿವಿಐಪಿಗಳನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾದ ವಿಮಾನ ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇತ್ತೀಚೆಗೆ ತನ್ನ ಕೊನೆಯ ಹಾರಾಟ ನಡೆಸಿದೆ.

            ಮುಂಬೈ ವಿಮಾನ ನಿಲ್ದಾಣದಿಂದ ತೆರಳಿದ 'ಕ್ವೀನ್ ಆಫ್ ಸ್ಕೈಸ್' ಎಂದೂ ಕರೆಯಲ್ಪಡುವ ಬೋಯಿಂಗ್ 747 ವಿಮಾನ ಅಮೆರಿಕದ ಪೇನ್‌ಫೀಲ್ಡ್‌ಗೆ ತನ್ನ ಕೊನೆಯ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸಿದೆ.


            ಅಲ್ಲಿ ಈ ವಿಮಾನವನ್ನು ಡಿಸ್‌ಮ್ಯಾಂಟಲ್ ಮಾಡಬಹುದು ಎಂದು ಹೇಳಲಾಗಿದೆ. ಉಳಿದ ವಿಮಾನಗಳನ್ನು ಈ ಕಂಪನಿಗಳು ಈ ವಿಮಾನವನ್ನು ಕಾರ್ಗೊ ಸರ್ವಿಸ್‌ಗಾಗಿ ಬಳಸುವ ಸಂಭವವಿದೆ. ಉಳಿದ ಎರಡು ಏರ್‌ ಇಂಡಿಯಾ ಬೋಯಿಂಗ್ 747 ವಿಮಾನಗಳನ್ನು ಮುಂಬೈನಲ್ಲಿ ಬಿಡಿಭಾಗಗಳನ್ನಾಗಿ (disassembled) ಮಾಡಲಾಗುವುದು. ಈ ವಿಮಾನದಲ್ಲಿನ ಬಿಡಿಭಾಗಗಳಲ್ಲಿ ಮರು ಬಳಕೆ ಮಾಡುವ ಪ್ರಕ್ರಿಯೆ ನಡೆಸಲಾಗುವುದು. ವಿಮಾನಗಳಲ್ಲಿ ಸುಮಾರು 800 ರಿಂದ ಸಾವಿರ ಮರುಬಳಕೆ ಮಾಡಬಹುದಾದ ಭಾಗಗಳು ಇರುತ್ತವೆ.

             ಏರ್ ಇಂಡಿಯಾ ಬಳಿ 4 ಬೋಯಿಂಗ್ 747 ವಿಮಾನಗಳಿದ್ದು, ನಾಲ್ಕು ವರ್ಷಗಳ ಹಿಂದೆಯೇ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಈ ವಿಮಾನಗಳ ಯುಗಾಂತ್ಯವಾಗಿದ್ದು, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಪೇನ್‌ಫೀಲ್ಡ್‌ಗೆ ಅಂತಿಮ ಪ್ರಯಾಣ ಬೆಳೆಸಿದೆ. ಈ ವಿಮಾನಗಳ ಅಂತಿಮ ವಿದಾಯಕ್ಕಾಗಿ, ಪೈಲಟ್‌ಗಳು 'ವಿಂಗ್ ವೇವ್' ಅನ್ನು ಪ್ರದರ್ಶಿಸಿದ್ದು, ಇದು ವಿಮಾನದ ನಿವೃತ್ತಿ ಅಥವಾ ಅಂತಿಮ ಪ್ರಯಾಣದ ಸಂಕೇತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

        ಈ ಹಿಂದೆ ಇಡೀ ವಾಯುಯಾನ ಮಾರುಕಟ್ಟೆಯನ್ನು ವ್ಯಾಪಿಸಿಕೊಂಡಿದ್ದ ಬೋಯಿಂಗ್ 747 ವಿಮಾನಗಳಿಗೆ ಇದೀಗ ಬದಲಿ ಮತ್ತು ಹೆಚ್ಚು ಪರಿಣಾಮಕಾರಿ ಜೆಟ್‌ ವಿಮಾನಗಳನ್ನು ಬದಲಾಯಿಸಲಾಗಿದೆ. ಮೊದಲ ಬೋಯಿಂಗ್ 747 ಅನ್ನು ಏರ್ ಇಂಡಿಯಾ ಮಾರ್ಚ್ 22, 1971 ರಂದು ಖರೀದಿ ಮಾಡಿತ್ತು. ದೇಶದ ಒಳಗೆ ಮತ್ತು ಹೊರಗೆ ಬಹುತೇಕ ಎಲ್ಲಾ ಸೇವೆಗಳಲ್ಲಿ ಇದನ್ನು ಬಳಸಲಾಗುತ್ತಿತ್ತು. ಹೆಚ್ಚಿನ ಸ್ಥಳಾವಕಾಶದ ಕಾರಣ, ಇದು ದೂರದ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿತ್ತು. 5 ದಶಕದ ಬಳಿಕ ಕೊನೆಗೂ ಇದು ಕೂಡ ತನ್ನ ಕಾರ್ಯಾಚರಣೆ ಕೊನೆಗೊಳಿಸಿದೆ.

           ಏರ್‌ ಇಂಡಿಯಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದೆ. ಇಂದು ನಾವು ಮುಂಬೈನಿಂದ ಹೊರಡುವ ನಮ್ಮ ಕೊನೆಯ 'ಕ್ವೀನ್ ಆಫ್ ದಿ ಸ್ಕೈ' B747 ಗೆ ವಿದಾಯ ಹೇಳುತ್ತಿದ್ದೇವೆ ಎಂದು ಏರ್ ಇಂಡಿಯಾ ಪೋಸ್ಟ್‌ನಲ್ಲಿ ಬರೆದಿದೆ. ಐಷಾರಾಮಿ ವಿಮಾನಗಳ ಯುಗವು ಕೊನೆಗೊಳ್ಳಲಿದೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಇತಿಹಾಸ

            ಬೋಯಿಂಗ್‌ನ ಮೊದಲ 747 ವಿಮಾನವು 1968 ರಲ್ಲಿ ಸಿದ್ಧವಾಗಿತ್ತು. ಈ ವಿಮಾನದ ಪರೀಕ್ಷೆಯ ನಂತರ 9 ಫೆಬ್ರವರಿ 1969 ರಂದು ತನ್ನ ಮೊದಲ ಹಾರಾಟವನ್ನು ನಡೆಸಿತು. DGCA ಪ್ರಕಾರ, ಮೊದಲ ಬೋಯಿಂಗ್ 747 ವಿಮಾನವನ್ನು ಮಾರ್ಚ್ 22, 1971 ರಂದು ಏರ್ ಇಂಡಿಯಾಕ್ಕೆ ವಿತರಿಸಲಾಗಿತ್ತು. ಇದರಲ್ಲಿ 16 ಪ್ರಥಮ ದರ್ಜೆ ಸೀಟುಗಳು ಮತ್ತು 40 ಬಿಸಿನೆಸ್ ಕ್ಲಾಸ್ ಸೀಟುಗಳಿದ್ದವು. ಈ ವಿಮಾನವನ್ನು ಮೂರು ಜನರು ಒಟ್ಟಿಗೆ ಹಾರಿಸುತ್ತಾರೆ. ಮೊದಲನೆಯದು ಕ್ಯಾಪ್ಟನ್, ಎರಡನೆಯದು ಫ್ಲೈಟ್ ಆಫೀಸರ್ ಮತ್ತು ಮೂರನೆಯದು ಫ್ಲೈಟ್ ಇಂಜಿನಿಯರ್.

              1971ರಲ್ಲಿ ಆಗ್ರಾ ಎಂಬ ಹೆಸರಿನ ಬೋಯಿಂಗ್ 747 ವಿಮಾನವನ್ನು ಏರ್ ಇಂಡಿಯಾ ತನ್ನ ಹಾರಾಟಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಈ ವಿಮಾನವು ಮಾರ್ಚ್ 2021ರಲ್ಲಿ ತನ್ನ ಕೊನೆಯ ವಾಣಿಜ್ಯ ಹಾರಾಟವನ್ನು ನಡೆಸಿತ್ತು. ಈ ವಿಮಾನದಲ್ಲಿ 423 ಆಸನಗಳಿದ್ದು, ಅವುಗಳಲ್ಲಿ 12 ಪ್ರಥಮ ದರ್ಜೆ ಆಸನಗಳು, 26 ಬಿಸಿನೆಸ್ ದರ್ಜೆಯ ಆಸನಗಳು ಹಾಗೂ 385 ಎಕಾನಮಿ ದರ್ಜೆಯ ಆಸನಗಳು ಸೇರಿದ್ದವು. ಬೋಯಿಂಗ್ 747 ವಿಮಾನವು ಜನವರಿ 21, 1970ರಲ್ಲಿ ನ್ಯೂಯಾರ್ಕ್ ನಿಂದ ಲಂಡನ್ ಮಾರ್ಗದಲ್ಲಿ ತನ್ನ ಮೊಟ್ಟ ಮೊದಲ ಪ್ರಯಾಣವನ್ನು ಪ್ಯಾನ್ ಆ್ಯಮ್ ಏರ್ ಲೈನ್ ಸಂಸ್ಥೆಯ ಮೂಲಕ ಪ್ರಾರಂಭಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries