HEALTH TIPS

ಮೇ 25 : ನಾಗರಾಜಕಟ್ಟೆ ಪ್ರತಿಷ್ಠಾ ವಾರ್ಷಿಕೋತ್ಸವ

                 ಕಾಸರಗೋಡು: ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸಮೀಪದ ನಾಗರಾಜ ಕಟ್ಟೆಯ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಮೇ 25 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 

                 ಅಂದು ಬೆಳಗ್ಗೆ 7.10 ಕ್ಕೆ ಪ್ರಾರ್ಥನೆ, 8 ಕ್ಕೆ ಗಣಹೋಮ, 8.30 ಕ್ಕೆ ಅಶ್ವತ್ಥ ಪೂಜೆ, 9 ಕ್ಕೆ ಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ, ಪವಮಾನ ಅಭಿಷೇಕ, 10 ಕ್ಕೆ ಗುಳಿಗ ತಂಬಿಲ, 11 ಕ್ಕೆ ಆಶ್ಲೇಷ ಬಲಿ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, 1 ರಿಂದ ಅನ್ನಸಂತರ್ಪಣೆ ನಡೆಯಲಿದೆ. 

            ಭಜನಾ ಕಾರ್ಯಕ್ರಮದಲ್ಲಿ ಆರಿಕ್ಕಾಡಿ ಹನುಮ ಭಕ್ತ ಭಜನಾ ಸಂಘ, ಪಾರೆಕಟ್ಟೆ ಶ್ರೀ ಮುತ್ತಪ್ಪ ಮಹಿಳಾ ಭಜನಾ ಸಂಘ, ಕಡಪ್ಪುರಂ ಶ್ರೀ ಕುರುಂಬಾ ಭಜನಾ ಸಂಘ ಭಾಗವಹಿಸುವರು. ರಾತ್ರಿ 8 ಕ್ಕೆ ಆರತಿ, 8.30 ಕ್ಕೆ ಬಪ್ಪನಾಡು ಮೇಳದವರಿಂದ `ನಾಡೂರು ನಾಗಬನ' ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries