HEALTH TIPS

ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ, ಕೇರಳದಲ್ಲಿಯೂ ತಾವರೆ ಅರಳುತ್ತೆ: ರವೀಶ ತಂತ್ರಿ

               ಮಂಜೇಶ್ವರ: ಮೋದಿ ಮತ್ತೆ ರಾಷ್ಟ್ರದ ಪ್ರಧಾನಿಯಾಗುವುದು ಖಚಿತ. ಈ ಬಾರಿ ಕೇರಳದಲ್ಲಿಯೂ ತಾವರೆ ಅರಳುತ್ತದೆ ಎಂದು  ಜಿಲ್ಲಾ ಬಿಜೆಪಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು.

              ಹೊಸಂಗಡಿ ಪ್ರೇರಣಾದಲ್ಲಿ ಗುರುವಾರ ಜರಗಿದ ಬಿಜೆಪಿ ಮಂಜೇಶ್ವರ ಮಂಡಲ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

               ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ವಿವರಿಸಿದರು. ಮುಖಂಡರಾದ ಯಾದವ ಬಡಾಜೆ, ವಿಘ್ನಶ್ವರ ಮಾಸ್ತರ್ ಕೆದುಕೋಡಿ, ಎ.ಕೆ. ಕಯ್ಯಾರ್, ಪದ್ಮನಾಭ ರೈ ಮೀಂಜ, ದಾಮೋದರ ಮೀಯಪದವು, ರಾಜ್ ಕುಮಾರ್ ಅರಿಬೈಲ್, ಚಂದ್ರಾವತಿ ಶೆಟ್ಟಿ, ವಿನಯ ಭಾಸ್ಕರ್, ನಾರಾಯಣ ತುಂಗಾ, ರಕ್ಷನ್ ಅಡಕಳ, ಜನಪ್ರತಿನಿಧಿಗಳು ಉಪಸ್ಥಿತರಿದ್ದರು, ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ.ಭಟ್ ವಂದಿಸಿದರು. ಈ ಸಂದರ್ಭ ರವೀಶÀ ತಂತ್ರಿಗಳ ಜನ್ಮದಿನದ ಆಚರಣೆಯನ್ನು ಪಕ್ಷದ ವತಿಯಿಂದ ಆಚರಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries