HEALTH TIPS

'ಭಾರತ ರತ್ನ' ಪ್ರದಾನ: ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ನರಸಿಂಹರಾವ್ ಕುಟುಂಬ

          ಹೈದರಾಬಾದ್: ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಮರಣೋತ್ತರವಾಗಿ 'ಭಾರತ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಕ್ಕಾಗಿ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

            ಹೈದರಾಬಾದ್‌ನ ರಾಜಭವನದಲ್ಲಿ ಮಂಗಳವಾರ ಮೋದಿ ಅವರನ್ನು ಭೇಟಿಯಾದ ಕುಟುಂಬಸ್ಥರು ಆತ್ಮೀಯವಾಗಿ ಮಾತುಕತೆ ನಡೆಸಿದರು.

             ನರಸಿಂಹರಾವ್ ಅವರ ಪುತ್ರ ಪಿ.ವಿ. ಪ್ರಭಾಕರ ರಾವ್, ಪುತ್ರಿ, ಬಿಆರ್‌ಎಸ್ ಎಂಎಲ್‌ಸಿ ವಾಣಿ ದೇವಿ, ನರಸಿಂಹರಾವ್ ಅವರ ಅಳಿಯ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಆರ್. ನಂದನ್ ಹಾಗೂ ಬಿಜೆಪಿ ಮುಖಂಡ ಎನ್.ವಿ. ಸುಭಾಷ್ ಇದ್ದರು.


                 ಈ ಕುರಿತು 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಮೋದಿ, 'ಹೈದರಾಬಾದ್‌ಗೆ ತಲುಪಿದ ನಂತರ ನಮ್ಮ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಕುಟುಂಬಸ್ಥರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಪ್ರಗತಿಯ ಬಗ್ಗೆ ನರಸಿಂಹರಾವ್ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದರು. ಇದೇ ವೇಳೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಶ್ರೀಮಂತಿಕೆಯ ಬಗ್ಗೆಯೂ ಮಾತನಾಡಿದೆವು' ಎಂದು ಬರೆದುಕೊಂಡಿದ್ದಾರೆ.

           ನರಸಿಂಹರಾವ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದೇವೆ ಎಂದು ಸುಭಾಷ್ ಹೇಳಿದ್ದಾರೆ.

               ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಹಣಕಾಸು, ಪ್ರವಾಸೋದ್ಯಮ, ಸನಾತನ ಧರ್ಮ ಮತ್ತು ಇಂದಿನ ರಾಜಕೀಯ ವಿದ್ಯಮಾನಗಳ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮೋದಿ ಅವರೊಂದಿಗೆ ಚರ್ಚೆ ನಡೆಸಲಾಯಿತು ಎಂದು ಸುಭಾಷ್ ತಿಳಿಸಿದ್ದಾರೆ.                

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries