ಮುಳ್ಳೇರಿಯ: ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯಂಗವಾಗಿ ಮುಳಿಯಾರು ಪಂಚಾಯತಿ ಮಟ್ಟದ ಸಾಂಕ್ರಾಮಿಕ ರೋಗ ನಿಯಂತ್ರಣ ಕ್ರಿಯಾ ಯೋಜನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಿನಿ ಪಿ.ವಿ. ಬಿಡುಗಡೆಗೊಳಿಸಿದರು.
ಗ್ರಾಮ ಪಂಚಾಯತಿ ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಇ.ಮೋಹನನ್ ಗಪ್ಪಿ ಮೀನು ವಿತರಣೆ ಉದ್ಘಾಟಿಸಿದರು. ಆರೋಗ್ಯ ಪರಿವೀಕ್ಷಕ ಬಿಬೀಶ್ ಎಂ. ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯ ಅಬ್ಬಾಸ್ ಕೊಳಚೆಪ್ಪು, ಸಿ.ನಾರಾಯಣಿ ಕುಟ್ಟಿ, ಅನನ್ಯ, ಪಬ್ಲಿಕ್ ಹೆಲ್ತ್ ನರ್ಸ್ ವಿ.ಶೋಭಾ ಮೊದಲಾದವರು ಶುಭಹಾರೈಸಿದರು. ವೈದ್ಯಾಧಿಕಾರಿ ಡಾ.ಶಮೀಮ ತನ್ವೀರ್ ಅಧ್ಯಕ್ಷತೆ ವಹಿಸಿದ್ದರು. ಜೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಜಿ.ಆರ್.ಜಿಬಿ ಸ್ವಾಗತಿಸಿ, ಎಂ.ಲತಿಕಾ ವಂದಿಸಿದರು.
ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಶಿಬಿರ ನಡೆಯಿತು. ಡಾ.ಶಮೀಮ ತನ್ವೀರ್, ಹೆಲ್ತ್ ಇನ್ಸ್‍ಪೆಕ್ಟರ್ ಬಿಬೀಶ್, ಜಿ.ಆರ್.ಜಿಬಿ ತರಗತಿ ನಡೆಸಿದರು. ತರಬೇತಿ ಶಿಬಿರದಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಕುಟುಂಬಶ್ರೀ ಕಾರ್ಯಕರ್ತರು ಭಾಗವಹಿಸಿದ್ದರು.

.jpg)
