ಬದಿಯಡ್ಕ: ಶ್ರೀಮದ್.ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ 4 ಚಾತುರ್ಮಾಸ್ಯ ವ್ರತಾಚರಣೆಯು ಜುಲೈ 21ರಿಂದ ಸೆಪ್ಟೆಂಬರ್ 18ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಈ ಹಿನ್ನೆಲೆಯಲ್ಲಿ ನಡೆಯುವ ಧಾರ್ಮಿಕ, ವೈದಿಕ, ಆರಾಧನೆ, ಅನುಷ್ಠಾನ ಸಹಿತ ಸಾಂಸ್ಕøತಿಕ ಕಾರ್ಯಕ್ರಮಗಳ ಯಶಸ್ಸಿಗೆ ಭರದ ಸಿದ್ಧತೆಯೊಂದಿಗೆ ಸ್ವಾಗತ ಸಮಿತಿ ರಚಿಸಲಾಯಿತು.
ಈ ನಿಟ್ಟಿನಲ್ಲಿ ಶ್ರೀ ಮಠದಲ್ಲಿ ಭಾನುವಾರ ಜರಗಿದ ಸಿದ್ಧತಾ ಸಭೆಯಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನವಿತ್ತರು. ಕೆಯ್ಯೂರು ನಾರಾಯಣ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್, ಉಜಿರೆ ಅಶೋಕ ಭಟ್, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಎಂ.ನಾ. ಚಂಬಲ್ತಿಮಾರ್, ವೇಣು ಎಡನೀರು, ರಾಜೇಂದ್ರ ಕಲ್ಲೂರಾಯ, ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಆನಂದ ಕೆ. ಮವ್ವಾರು, ವಿಠಲ ಭಟ್, ಮಹೇಶ ವಳಕ್ಕುಂಜ, ಕೆ.ಮಾಧವ ಹೇರಳ, ಕೆ.ಎನ್. ವೆಂಕಟ್ರಮಣ ಹೊಳ್ಳ, ಕಮಲಾಕ್ಷ ಕಲ್ಲುಗದ್ದೆ ಪ್ರೊ.ಎ.ಶ್ರೀನಾಥ್, ಜಯನಾರಾಯಣ ತಾಯನ್ನೂರು ಮೊದಲಾದವರು ಕಾರ್ಯಕ್ರಮ ಯಶಸ್ಸಿಗೆ ಸಲಹೆ ಸೂಚನೆಗಳನ್ನಿತ್ತರು. ಲವಕುಮಾರ್ ಐಲ ಪ್ರಾರ್ಥಿಸಿದರು. ವಕೀಲ ಎಂ. ನಾರಾಯಣ ಭಟ್ ವಂದಿಸಿ, ಸೂರ್ಯ ಭಟ್ ಎಡನೀರು ಕಾರ್ಯಕ್ರಮ ನಿರೂಪಿಸಿದರು.


