ಪೆರ್ಲ :ನೇತಾಜಿ ಸಾರ್ವಜನಿಕ ಗ್ರಂಥಾಲಯದಲ್ಲಿ ವಾಚನಾ ಪಾಕ್ಷಿಕ ಉದ್ಘಾಟನೆ ನಡೆಯಿತು. ಎಣ್ಮಕಜೆ ಗ್ರಂಥಾಲಯಗಳ ಒಕ್ಕೂಟ ಸಮಿತಿ ಕನ್ವೀನರ್ ಸಲಾಹುದ್ದೀನ್ ಮಾಸ್ತರ್ ಉದ್ಘಾಟಿಸಿದರು. ಅವರು ಮಾತನಾಡಿ, ವಾಚನಾ ಪಕ್ಷಾಚರಣೆ ಓದುವ ಹಬ್ಬವಾಗಿ ನಾಡಿನ ಪ್ರತಿಯೊಂದು ಗ್ರಂಥಾಲಯಗಳು ಮಾಡಲು ಆರಂಭಿಸಿದೆ. ಇದು ಪುಸ್ತಕದ ಒಳ ತಿರುಳನ್ನು ಗ್ರಹಿಸಿದ ಅರಿವನ್ನು ಹಂಚಿಕೊಳ್ಳುವಿಕೆಗೆ ಸಾಕಾರವಾಗುತ್ತದೆ ಎಂದು ನುಡಿದರು.
ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಶ್ರೀನಿವಾಸ ಪೆರಿಕ್ಕಾನ,ನಿರ್ಮಲಾ ಸೇಸಪ್ಪ ಖಂಡಿಗೆ, ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ, ಪರಿಸರ ತಜ್ಞ ಅರವಿಂದ ಕುಡ್ಲ ಭಾಗವಹಿಸಿದ್ದರು. ಉಪನ್ಯಾಸಕ ಶ್ರೀರಾಜ್ ಪೆರ್ಲ , ವಿಶ್ವರಾಜ್, ಸಾಮಾಜಿಕ ಕಾಯ9ಕರ್ತ ವಿನೋದ್ ಸುರೇಶ್ ಮತ್ಯ9 ಶುಭಾಶಂಸನೆಗೈದರು. ಗ್ರಂಥಪಾಲಕಿ ಕವಿತಾ ಉಪಸ್ಥಿತರಿದ್ದರು.ಕಾರ್ಯದರ್ಶಿ ಉದಯ ಸಾರಂಗ ಸ್ವಾಗತಿಸಿ ಸದಸ್ಯೆ ವನಜಾಕ್ಷಿ ಚಂಬ್ರಕಾನ ವಂದಿಸಿದರು.

.jpg)
