ಮಂಜೇಶ್ವರ : ಉದ್ಯಾವರ ತೋಟ ಜಿ.ಎಂ.ಎಲ್.ಪಿ. ಶಾಲೆಙಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ನಡೆಯಿತು. ಬೆಳಗ್ಗೆ ನಡೆದ ವಿಶೇಷ ಅಸೆಂಬ್ಲಿಯಲ್ಲಿ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಮಾಹಿತಿ ನೀಡಿದರು. . ಹಿರಿಯ ಶಿಕ್ಷಕ ರವಿಶಂಕರ ಮಾಸ್ತರ್ ಅವರು ಮಾದಕ ವಸ್ತುಗಳ ಕಿರು ಮಾಹಿತಿಯನ್ನು ನೀಡಿದರು. ಮಾದಕ ವಸ್ತುಗಳಿಗೆ ಸಂಬಂಧಿಸಿದಂತಹ ವಿವಿಧ ವಿಡಿಯೋಗಳನ್ನು ಪ್ರದರ್ಶಿಸಲಾಯಿತು.
ದಿನಕ್ಕೆ ಸಂಬಂಧಿಸಿದ ಮಕ್ಕಳು ತಯಾರಿಸಿದ ಭಿತ್ತಿ ಪತ್ರಿಕೆಯನ್ನು ಮಸೀದಿಯ ಉಸ್ತಾದರಾದ ಸ್ವಾದಿಕ್ ಸಅದಿ ಅವರು ಬಿಡುಗಡೆಗೊಳಿಸಿದರು. ಶಿಕ್ಷಕಿ ಗಾಯತ್ರಿ ಶುಭಾಶಂಸನೆಗೈದರು. ಮಾದಕ ವಸ್ತು ವಿರೋಧಿ ಪ್ರತಿಜ್ಞೆ ಬೋಧಿಸಲಾಯಿತು. ಜೊತೆಗೆ ಜಾಗೃತಿ ಮೆರವಣಿಗೆ ನಡೆಯಿತು. ಶಿಕ್ಷಕಿ ಐಶ್ವರ್ಯ ಮೂಸೋಡಿ ಸ್ವಾಗತಿಸಿ, ವಂದಿಸಿದರು.




.jpg)
