ಮಂಜೇಶ್ವರ: ಮೀಯಪದವು ಸಮೀಪದ ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಪಿ.ಟಿ.ಎ ಮಹಾಸಭೆ ಜರಗಿತು. ಅಕಾಡೆಮಿಕ್ ಮಾಸ್ಟರ್ ಪ್ಲ್ಯಾನ್ ಬಿಡುಗಡೆಗೊಳಿಸಲಾಯಿತು. ಶಾಲಾ ಪ್ರಬಂಧಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.
ಪಿ.ಟಿ.ಎ ಅಧ್ಯಕ್ಷರಾಗಿ ಗಣೇಶ ಜಪ್ಪ ಹಾಗೂ ಮಾತೃ ಮಂಡಳಿ ಅಧ್ಯಕ್ಷೆಯಾಗಿ ಹೇಮಾವತಿ ಚಿಗುರುಪಾದೆ ಆಯ್ಕೆಗೊಂಡರು. ಪ್ರಿ-ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾಗಿ ಜಯಪ್ರಕಾಶ್ ಕುಳೂರು ಹಾಗೂ ಮಾತೃಮಂಡಳಿ ಆಧ್ಯಕ್ಷೆಯಾಗಿ ಸುಮಿತ್ರ ಚಿಗುರುಪಾದೆ ಆಯ್ಕೆಗೊಂಡರು.




.jpg)
