HEALTH TIPS

ವಿದ್ಯಾರ್ಥಿ ಪೋಲೀಸ್ ಜೂನಿಯರ್ ಬ್ಯಾಚ್ ಕೆಡೆಟ್ ಆಯ್ಕೆ ಪ್ರಾರಂಭ

                  ಕಾಸರಗೋಡು: ಹೊಸ ಶೈಕ್ಷಣಿಕ ವರ್ಷದ ಪ್ರಾರಂಭದೊಂದಿಗೆ, 2024-25 ನೇ ಬ್ಯಾಚ್‍ಗೆ ಸ್ಟೂಡೆಂಟ್ ಪೋಲೀಸ್ ಕೆಡೆಟ್ ಜೂನಿಯರ್ ಬ್ಯಾಚ್‍ನ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. 8ನೇ ತರಗತಿಯ ವಿದ್ಯಾರ್ಥಿಗಳನ್ನು ಜೂನಿಯರ್ ಬ್ಯಾಚ್‍ಗೆ ಆಯ್ಕೆ ಮಾಡಲಾಗುತ್ತದೆ. ಜಿಲ್ಲೆಯ 43 ಶಾಲೆಗಳಲ್ಲಿ ಎಸ್‍ಪಿಸಿ ಯೋಜನೆ ಇದೆ. ಅದರಲ್ಲಿ ಒಂದು ಹೈಯರ್ ಸೆಕೆಂಡರಿ ಶಾಲೆ ಮತ್ತು ಎರಡು ಶಾಲೆಗಳು ಮಾದರಿ ವಸತಿ ಶಾಲೆಗಳಾಗಿವೆ. ಮಾದರಿ ವಸತಿ ಶಾಲೆಗಳಲ್ಲಿ 8ನೇ ತರಗತಿಯಲ್ಲಿ 35 ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರೂ ಎಸ್‍ಪಿಸಿ ಕೆಡೆಟ್‍ಗಳು. ಇತರ ಶಾಲೆಗಳಲ್ಲಿ, ಪ್ರವೇಶ ಪರೀಕ್ಷೆ ಮತ್ತು ದೈಹಿಕ ಸಾಮಥ್ರ್ಯ ಪರೀಕ್ಷೆಯ ಆಧಾರದ ಮೇಲೆ ಕೆಡೆಟ್‍ಗಳನ್ನು ಆಯ್ಕೆ ಮಾಡಲಾಗುತ್ತದೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವ ಶಾಲೆಗಳಲ್ಲಿ ಮೊದಲು ಪ್ರಾಥಮಿಕ ಪರೀಕ್ಷೆ ನಡೆಸಿ ನಂತರ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ನಡೆಸಿ ತಾತ್ಕಾಲಿಕ ರ ್ಯಾಂಕ್ ಪಟ್ಟಿ ಪ್ರಕಟಿಸಲಾಗಿದೆ. ತಾತ್ಕಾಲಿಕ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ದೈಹಿಕ ಸಾಮಥ್ರ್ಯ ಪರೀಕ್ಷೆಯನ್ನು ಪ್ರಸ್ತುತ ಶಾಲೆಗಳಲ್ಲಿ ನಡೆಸಲಾಗುತ್ತಿದೆ.

             ಎಸ್‍ಪಿಸಿ ಜಿಲ್ಲಾ ಸಹಾಯಕ ನೋಡಲ್ ಅಧಿಕಾರಿ ಟಿ.ತಂಬಾನ್, ವಿದ್ಯಾನಗರ ಸಬ್ ಇನ್‍ಸ್ಪೆಕ್ಟರ್ ವಿಜಯನ್ ಮೇಲೆಟ್, ಸಮುದಾಯ ಪೋಲೀಸ್ ಅಧಿಕಾರಿಗಳಾದ ಇಲ್ಯಾಸ್ ಮಾಸ್ತರ್, ಸಿಂಧು ಟೀಚರ್, ಸಿವಿಲ್ ಪೋಲೀಸ್ ಅಧಿಕಾರಿಗಳಾದ ಅಬ್ದುಲ್ ಸಲಾಂ, ಪ್ರಸೀತಾ, ಎಸ್‍ಪಿ ಸಿ ಯೋಜನಾ ಸಹಾಯಕ ಕೆ.ಅನೂಪ್ ನೇತೃತ್ವ ವಹಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries