HEALTH TIPS

ಸರಕು ಸಾಗಣೆ ಹಡಗು ಗುರಿಯಾಗಿಸಿ ಡ್ರೋನ್‌ ದಾಳಿ: ಹೂಥಿ ಕೃತ್ಯ ಶಂಕೆ

            ದುಬೈಯೆಮೆನ್‌ನ ಹೂಥಿ ಬಂಡುಕೋರರು ಉಡಾವಣೆ ಮಾಡಿದ್ದರು ಎನ್ನಲಾದ ಡ್ರೊನ್‌, ಕೆಂಪುಸಮುದ್ರದಲ್ಲಿ ಹಡಗೊಂದಕ್ಕೆ ಡಿಕ್ಕಿ ಹೊಡೆದಿದ್ದು, ಜಖಂಗೊಳಿಸಿದೆ. ಹಡಗುಗಳನ್ನು ಗುರಿಯಾಗಿಸಿ ನಡೆದ ಡ್ರೋನ್‌ ದಾಳಿಯ ಮತ್ತೊಂದು ಪ್ರಕರಣ ಇದಾಗಿದೆ.

           ಅಮೆರಿಕವು ಇಲ್ಲಿ ನಿಯೋಜಿಸಿದ್ದ ಯುಎಸ್‌ಎಸ್‌ ಡ್ವೈಟ್‌ ಡಿ ಐಸೆನ್‌ಹೊವೆರ್ ತುಕಡಿಯನ್ನು ಸ್ವದೇಶಕ್ಕೆ ಕಳುಹಿಸಿದ್ದ ಹಿಂದೆಯೇ ಈ ದಾಳಿ ಪ್ರಕರಣ ವರದಿಯಾಗಿದೆ.

           ಚೀನಾದ ಕ್ವಿಂಗ್ಡಾವೊಗೆ ತೆರಳುತ್ತಿದ್ದ ಹಡಗು ಗುರಿಯಾಗಿಸಿ ದಾಳಿ ನಡೆದಿದೆ. ಸದ್ಯ ಹೂಥಿ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ತಡವಾಗಿ ಹೊಣೆ ಹೊರಬಹುದು ಎನ್ನಲಾಗಿದೆ.

           ನಿರ್ದಿಷ್ಟ ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿ ಹೂಥಿ ಬಂಡುಕೋರರು ಇದುವರೆಗೂ 60ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದಾರೆ.

              ಏಷ್ಯಾ, ಮಧ್ಯಪ್ರಾಚ್ಯ ಮತ್ತು ಐರೋಪ್ಯ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವ ಈ ನಿರ್ಣಾಯಕ ಮಾರ್ಗದಲ್ಲಿ, ಡ್ರೋನ್‌ ದಾಳಿ ಪ್ರಕರಣಗಳ ಬಳಿಕ ಹಡಗುಗಳ ಸಂಚಾರ ಕಡಿಮೆ ಆಗಿದೆ. ಇಸ್ರೇಲ್-ಹಮಾಸ್‌ ನಡುವಿನ ಸಂಘರ್ಷ ನಿಲ್ಲುವವರೆಗೂ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಹೂಥಿ ಬಂಡುಕೋರರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries