ಕುಂಬಳೆ: ದಿ. ಕೊಡಗಿನ ಗೌರಮ್ಮನ ಮೊಮ್ಮಕ್ಕಳು ಹಾಗೂ ಹವ್ಯಕ ಮಹಾ ಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಒಂದು ಸಣ್ಣಕತಾಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದಾಗಿದೆ. ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಹವ್ಯಕ ಮಹಿಳೆಯರು, ವಯೋಮಿತಿ ಇಲ್ಲದೆ ಪಾಲ್ಗೊಳ್ಳಬಹುದು. ಕಾಲೇಜು, ಹೈಸ್ಕೂಲು ವಿದ್ಯಾರ್ಥಿನಿಯರೂ ಬರೆಯಬಹುದು. .ಯಾವುದೇ ಸೀಮೆಯ ಹವ್ಯಕ ಭಾಷೆಯಲ್ಲಿ ಬರೆಯಬಹುದು. ಈ ವರೆಗಿನ ಪ್ರಥಮ ವಿಜೇತೆಯರಿಗೆ ಅವಕಾಶ ಇರುವುದಿಲ್ಲ. ಈ ವರೆಗೆ ಎಲ್ಲೂ ಪ್ರಕಟವಾಗದ, ಭಾಷಾಂತರ ಅಲ್ಲದ ಸಾಮಾಜಿಕ ಕತೆಯಾಗಿರಬೇಕು.
ಎಂಟು ಪುಟಕ್ಕೆ ಮೀರದೆ, ಕಾಗದದ ಒಂದೇ ಬದಿಗೆ ಸ್ಪುಟವಾಗಿ, ಟೈಪ್ ಮಾಡಿದ್ದಾದರೆ ಉತ್ತಮ (ಸಾದಾರಣ ಎರಡು ಸಾವಿರ ಪದಗಳು) ಹೆಸರು, ವಿಳಾಸ ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಕತೆಬರೆದ ಕಾಗದದಲ್ಲಿ ಹೆಸರು-ವಿಳಾಸಗಳು ಇರಬಾರದು. ಇಮೇಲ್ ಅಥವಾ ಕೊರಿಯರ್ ಮುಖಾಂತರ ಕಳುಹಿಸಿದರೆ ಸ್ವೀಕೃತವಾಗದು. ಬಹುಮಾನಗಳು ಪ್ರಶಸ್ತಿ ಪತ್ರ, ಸ್ಮರಣಿಕೆ ಜೊತೆಗೆ ನಗದು, ಪ್ರಥಮ- ನಾಲ್ಕುಸಾವಿರ, ದ್ವಿತೀಯ- ಮೂರುಸಾವಿರ, ತೃತೀಯ- ಎರಡುಸಾವಿರ ರೂಪಾಯಿಗಳನ್ನು ನೀಡಲಾಗುವುದು.
ಆಸಕ್ತರು ಅಂಚೆಮೂಲಕ ವಿಜಯಾಸುಬ್ರಹ್ಮಣ್ಯ ಕುಂಬಳೆ, ಸಂಚಾಲಕಿ,ಕೊಡಗಿನಗೌರಮ್ಮ ಕಥಾಸ್ಪರ್ಧೆ, ಕಾರ್ತಿಕೇಯ, ನಾರಾಯಣಮಂಗಲ, ಅಂಚೆ: ಕುಂಬಳೆ -671321, ಕಾಸರಗೋಡು ಜಿಲ್ಲೆ ಮೊಃ 8547214125, 6238537267 ಇವರಿಗೆ ಆಗಸ್ಟ್ 30ರ ಮೊದಲು ತಲುಪುವಂತೆ ಕಳುಹಿಸಬೇಕಾಗಿ ತಿಳಿಸಲಾಗಿದೆ.





