ಕಾಸರಗೋಡು: ಸಹಜೀವನಂ ಸ್ನೇಹ ಗ್ರಾಮ ಮಾದರಿ ಶಿಶುಪಾಲನಾ ಕೇಂದ್ರಗಳಿಗೆ ಥೆರಾಪಿಸ್ಟ್ಗಳು ಹಾಗೂ ವಿಶೇಷ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಗಾಗಿ ಸ್ಥಳೀಯವಾಗಿ ಈ ವಲಯದಲ್ಲಿರುವ ತಜ್ಞರನ್ನು ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ನ್ಯಾಯ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಆರ್.ಬಿಂದು ತಿಳಿಸಿದ್ದಾರೆ.
ಅವರು ಸಹಜೀವನಂ ಸ್ನೇಹಗ್ರಾಮ ಹಾಗೂ ಮಾದರಿ ಶಿಶುಪಾಲನಾ ಕೇಂದ್ರಗಳ ಕಾರ್ಯವೈಖರಿ ಪರಿಶೀಲನೆಗಾಗಿ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಸರಗೋಡು ಜಿಲ್ಲೆಯ ತಜ್ಞ ಚಿಕಿತ್ಸಕರಿಗೆ ಸರಕಾರ ನಿಗದಿಪಡಿಸಿದ ವೇತನಕ್ಕೆ ಹೆಚ್ಚುವರಿಯಾಗಿ ಪ್ರೋತ್ಸಾಹಧನ ನೀಡಲು ವಿಶೇಷ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ. ಜಿಲ್ಲೆಯ ಬಡ್ಸ್ ಶಾಲೆಗಳಲ್ಲಿ ೪೬ ನೌಕರರು ಸಾಮಾಜಿಕ ಭದ್ರತೆ ಹೊಂದಿದ್ದು, ಮಿಷನ್ ವೇತನ ಪಾವತಿಸುತ್ತದೆ. ಮುಖ್ಯಮಂತ್ರಿ ಮಟ್ಟದಲ್ಲಿ ನಡೆದ ಸಭೆಯ ತೀರ್ಮಾನ ಇದಾಗಿದ್ದು, ಮುಂಬರುವ ಅಕ್ಟೋಬರ್‌ನಿಂದ ಚಾಲಕ ಮತ್ತು ಅಡುಗೆಯವರನ್ನು ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಸಾಮಾಜಿಕ ಭದ್ರತಾ ಮಿಷನ್ ವೇತನ ನೀಡಲಿದೆ.
ಎಂಡೋ ಸಂತ್ರಸ್ತರ ಕಲ್ಯಾಣಕ್ಕೆ ಕ್ರಮ:
ಎಂಡೋಸಲ್ಫಾನ್ ಸಂತ್ರಸ್ತರ ಕಲ್ಯಾಣಕ್ಕಾಗಿ ವಿವಿಧ ವಲಯಗಳ ಜಂಟಿ ಕ್ರಮ ಅಗತ್ಯ. ಇದಕ್ಕೆ ಸಾಮಾಜಿಕ ಬದ್ಧತಾ ನಿದಿ, ಸಂಸದ ಹಾಗೂ ಶಾಸಕರ ನಿದಿ,ü ಸ್ಥಳೀಯಾಡಳಿತ ಸಂಸ್ಥೆಗಳ ಯೋಜನಾ ನಿದಿ ಅಗತ್ಯ ಎಂದು ಸಚಿವರು ಹೇಳಿದರು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೊಸದಾಗಿ ಸಂತ್ರಸ್ತರ ಪತ್ತೆಗೆ ಹಾಗೂ ಈಗಾಘಲೇ ನಡೆಸಿರುವ ವೈದ್ಯಕೀಯ ಶಿಬಿರದಲ್ಲಿ ಪಟ್ಟಿಯಿಂದ ಹೊರಗುಳಿದಿರುವ ೧೩೦೦ಕ್ಕೂ ಹೆಚ್ಚು ಸಂತ್ರಸ್ತರ ಪರಿಗಣಿಸಲು ನಿರ್ಧರಿಸಲಾಗಿದೆ. ಆರೋಗ್ಯ ಇಲಾಖೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಶಿಬಿರ ಆಯೋಜಿಸುತ್ತದೆ. ವೈದ್ಯಕೀಯ ಶಿಬಿರ ನಡೆಸುವ ಜವಾಬ್ದಾರಿಯನ್ನೂ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ವೈದ್ಯಕೀಯ ಶಿಬಿರ ಆಯೋಜಿಸಲುಕೇರಳ ಸಾಮಾಜಿಕ ಭದ್ರತಾ ಮಿಷನ್ ೧೫ ಲಕ್ಷ ರೂ.ಮೊತ್ತ ಮಂಜೂರು ಮಾಡಲಿದ್ದು, ಅಗತ್ಯವಿರುವ ಹೆಚ್ಚುವರಿ ಮೊತ್ತವನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವೆ ತಿಳಿಸಿದರು. ಎಂಡೋಸಲ್ಫಾನ್ ಸಂತ್ರಸ್ತರಿಗೆ ಮೂರನೇ ಹಂತದಲ್ಲಿ ಸಾಯಿ ಟ್ರಸ್ಟ್ ವತಿಯಿಂದ ಮನೆ ನಿರ್ಮಾಣಕ್ಕೆ ಪರಪ್ಪ ಗ್ರಾಮದಲ್ಲಿ ನಿವೇಶನ ಹಂಚಿಕೆಗೆ ಪೂರ್ವಭಾವಿ ಸಿದ್ಧತೆಗಾಗಿ ಭೂಸ್ಕೆಚ್ ಹಾಗೂ ಒಪ್ಪಿಗೆ ಪತ್ರವನ್ನು ಸಾಮಾಜಿಕ ನ್ಯಾಯ ಮತ್ತು ಉನ್ನತ ಶಿಕ್ಷಣ ಸಚಿವ ಆರ್. ಬಿಂದು ಸಾಯಿ ಟ್ರಸ್ಟ್ ಜಿಲ್ಲಾಧ್ಯಕ್ಷ ವಕೀಲ ಮಧುಸೂದನ್ ಅವರಿಗೆ ಹಸ್ತಾಂತರಿಸಿದರು.
ಸಾಮಾಜಿಕ ನೀತಿ ಇಲಾಖೆ ನಿರ್ದೇಶಕ ಎಚ್. ದಿನೇಶ್ ಐ.ಎ.ಎಸ್, ಶಾಸಕರಾದ ಎನ್.ಎ ನೆಲ್ಲಿಕುನ್ನು, ಸಿ.ಎಚ್ ಕುಞಂಬು, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮೊದಲಾದವರು ಉಪಸ್ಥಿತರಿದ್ದರು.





