ಕಾಸರಗೋಡು: ಕುಟುಂಬಶ್ರೀ ಮಾದರಿಯಲ್ಲಿ ರಾಜ್ಯದಲ್ಲೂ ಶೀಘ್ರವೇ ವಿಕಲಚೇತನರ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಗುವುದು ಎಂದು ಸಾಮಾಜಿಕ ನ್ಯಾಯ ಮತ್ತು ಉನ್ನತ ಶಿಕ್ಷಣ ಖಾತೆ ಸಚಿವೆ ಆರ್. ಬಿಂದು ತಿಳಿಸಿದ್ದಾರೆ.
ಅವರು ಕಾಞಂಗಾಡ್ ನಗರಭಾ ಭವನದಲ್ಲಿ 'ಶ್ರವಣ ಹಸ್ತದಾನ' ಯೋಜನೆಯ ಫಲಾನುಭವಿಗಳಿಗೆ ೨೦,೦೦೦ ರೂ.ಗಳ ಸ್ಥಿರ ಠೇವಣಿ ಪ್ರಮಾಣ ಪತ್ರ, ಕೃತಕ ಕಾಲು ಹಾಗೂ ಇತರ ಸಹಾಯಧನ ಹಾಗೂ ಇತರ ಸೌಲಭ್ಯ ವಿತರಿಸಿ ಮಾತನಾಡಿದರು.
ಸಮಾರಂಭದಲ್ಲಿ ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಜ್ ಪಾದೂರು, ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ, ಕಾಞಂಗಾಡು ನಗರಸಭಾ ವಾರ್ಡ್ ಕೌನ್ಸಿಲರ್ ವಂದನಾ, ರಾಜ್ಯ ಸಲಹಾ ಮಂಡಳಿ ಸದಸ್ಯೆ ರಮಾ, ಡಿಎಡಬ್ಲ್ಯುಎಫ್ ಜಿಲ್ಲಾ ಕಾರ್ಯದರ್ಶಿ ಸಿ.ವಿ.ಸುರೇಶ್, ಕೇರಳ ರಾಜ್ಯ ಅಂಗವಿಕಲರ ಕಲ್ಯಾಣ ನಿಗಮದ ಆಡಳಿತ ಮಂಡಳಿ ಸದಸ್ಯರಾದ ಒ.ವಿಜಯನ್, ಗಿರೀಶ್ ಕೀರ್ತಿ, ಚಾರುಮೂಡ್ ಪುರುಷೋತ್ತಮನ್ ಉಪಸ್ಥಿತರಿದ್ದರು. ಕೇರಳ ರಾಜ್ಯ ಅಂಗವಿಕಲರ ಕಲ್ಯಾಣ ನಿಗಮದ ಅಧ್ಯಕ್ಷ ವಕೀಲ ಎಂ.ವಿ.ಜಯದಾಲಿ ಸ್ವಾಗತಿಸಿದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ ರಾಜ್ ವಂದಿಸಿದರು.




.jpeg)
