ಕಾಸರಗೋಡು: ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ಕಾರ್ಗಿಲ್ ವಿಜಯೋತ್ಸವ ದಿನದಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಕಾರ್ಗಿಲ್ ಸ್ಮಾರಕಕ್ಕೆ ಪುಷ್ಪಚಕ್ರ ಇರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು.
ಜಿಲ್ಲಾ ಸೈನಿಕ ಕಲ್ಯಾಣ ಕಛೇರಿ ಹಾಗೂ ಪೂರ್ವ ಸೇನಾ ಸೇವಾ ಪರಿಷತ್ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು. ಜಿಲ್ಲಾ ಸೈನಿಕ ಕಲ್ಯಾಣಾಧಿಕಾರಿ ಕೆ.ಕೆ. ಶಾಜಿ, ಹುಸೂರು ಶಿರಸ್ತೇದಾರ್ ಆರ್. ರಾಜೇಶ್, ಪೂರ್ವ ಸೈನಿಕ್ ಸೇವಾ ಪರಿಷತ್ತಿನ ರಕ್ಷಾಧಿಕಾರಿ ವಿ.ಜಿ.ಶ್ರೀಕುಮಾರ್, ಅಧ್ಯಕ್ಷ ಪಿ. ರಾಜೀವನ್, ಕಾರ್ಯದರ್ಶಿ ಕೆ.ಟಿ.ರಾಜನ್, ಎಸ್‌ಎಂಎಸ್ ಪ್ರತಿನಿಧೀಗಳು, ಮಾಜಿ ಸೈನಿಕರ ಪತ್ನಿಯರ ಸಂಘಟನೆ ಪ್ರತಿನಿಧಿಗಳು, ಕಲೆಕ್ಟರೇಟ್ ನೌಕರರು ಮೊದಲಾದವರು ಪಾಲ್ಗೊಂಡಿದ್ದರು.





