ಬದಿಯಡ್ಕ: ಕಾರ್ಗಿಲ್ ವಿಜಯೋತ್ಸವದ ೨೫ನೇ ವರ್ಷದ ಸಂಭ್ರಮಾಚರಣೆ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ಜರಗಿತು. ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರಿಂದ ಕಾರ್ಗಿಲ್ ವೀರಯೋಧರ ಭಾವಚಿತ್ರ, ಘೋಷವಾಕ್ಯಗಳೊಂದಿಗೆ ಮೆರವಣಿಗೆ ನಡೆಯಿತು. ನಂತರ ಶಾಲಾ ಸಭಾಂಗಣದಲ್ಲಿ ಮಕ್ಕಳಿಂದ ನಾಟಕ, ನೃತ್ಯ, ದೇಶಭಕ್ತಿಗೀತೆಯೊಂದಿಗೆ ವಿವಿಧ ಕಾರ್ಯಕ್ರಮಗಳು ಜರಗಿತು.
ಅಧ್ಯಾಪಿಕೆ ರಶ್ಮಿ ಪೆರ್ಮುಖ ಮಾತನಾಡಿ ಮಕ್ಕಳಲ್ಲಿ ದೇಶಪ್ರೇಮವನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ. ನಮ್ಮ ದೇಶದ ಚರಿತ್ರೆ ಏನು?, ದೇಶಕ್ಕಾಗಿ ವೀರ ಯೋಧರ ಬಲಿದಾನದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಬರಬೇಕು ಎಂದರು. ಅಧ್ಗಯಾಪಕ ವೃಂದದ ವಿನಯಪಾಲ್, ಗಣೇಶ್ ನೇತೃತ್ವ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು.




.jpg)
