ಪೆರ್ಲ: ೨೦೨೪-೨೫ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೇರಳವನ್ನು ಅವಗಣಿಸಿರುವುದನ್ನು ಯುವ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿಯ ವತಿಯಿಂದ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಲಾಯಿತು.
ಪೆರ್ಲ ಅಂಚೆ ಕಚೇರಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಕೇರಳದ ನಕ್ಷೆಯನ್ನು ಕಳುಹಿಸುವ ಮೂಲಕ "ಕೇರಳ ಭಾರತದಲ್ಲಿದೆ ಮೇಡಂ" ಎಂಬ ಸಂದೇಶದ ಮೂಲಕ ಎಚ್ಚರಿಸಲಾಗಿದೆ. ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ವಿಶಿಷ್ಟ ಪ್ರತಿಭಟನೆಯನ್ನು ಉದ್ಘಾಟಿಸಿದರು.
ಎಣ್ಮಕಜೆ ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪಿ.ಎಂ ಅಧ್ಯಕ್ಷತೆ ವಹಿಸಿದರು. ಬಾಲಕೃಷ್ಣ ಕುಲಾಲ್ ನಲ್ಕ, ಶರೀಫ್ ಪೆರ್ಲ, ಆಸಿಫ್ ಬಣ್ಪುತ್ತಡ್ಕ ಮಾತನಾಡಿದರು. ಯುವ ಕಾಂಗ್ರೆಸ್ ಮಂಡಲದ ಪ್ರಧಾನ ಕಾರ್ಯದರ್ಶಿ ಹನೀಫ್ ಕಾಟುಕುಕ್ಕೆ ಸ್ವಾಗತಿಸಿ, ಯುವ ಕಾಂಗ್ರೆಸ್ ಮಂಡಲ ಕಾರ್ಯದರ್ಶಿ ಜಬ್ಬಾರ್ ನಲ್ಕ ವಂದಿಸಿದರು.




.jpg)
.jpg)
