ಮಂಜೇಶ್ವರ: ಉದ್ಯಾವರ ತೋಟ ಸರ್ಕಾರಿ ಮುಸ್ಲಿಮ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಂದ್ರದಿನದ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಅಧ್ಯಕ್ಷತೆ ವಹಿಸಿದ್ದರು. ಬಡಾಜೆ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಬಿ ಚಾಂದ್ರದಿನ ವೀಡಿಯೋ ಪ್ರದರ್ಶನವನ್ನು ಉದ್ಘಾಟಿಸಿದರು.
ಸಭೆಯಲ್ಲಿ ಅಂಗನವಾಡಿ ಅಧ್ಯಾಪಿಕೆ ಪ್ರಮೀಳ ಶುಭಾಶಂಸನೆಗೈದರು. ಹಿರಿಯ ಅಧ್ಯಾಪಕ ರವಿಶಂಕರ ನೆಗಳಗುಳಿ ಚಾಂದ್ರದಿನದ ಮಹತ್ವವನ್ನು ತಿಳಿಸಿ ಸ್ವಾಗತಿಸಿದರು. ಶಾಲಾ ಮಕ್ಕಳಿಗೆ ರಸಪ್ರಶ್ನೆ, ರಾಕೆಟ್ ತಯಾರಿ, ಬಣ್ಣ ನೀಡುವ ವಿವಿಧ ಸ್ಪರ್ಧೆಗಳು ನಡೆಯಿತು. ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಐಶ್ವರ್ಯ ಟೀಚರ್ ಸಭೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಿಕೆ ಗಾಯತ್ರಿ ಟಿ.ಎನ್ ವಂದಿಸಿದರು.




.jpg)
