ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿಯ ಅಪ್ಪಯ್ಯಮೂಲೆ ನಿವಾಸಿ ಸ್ವಸ್ತಿಕ್ ಎ.ಎಸ್ ಪೆರ್ಲರಿಗೆ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನ ಡಾಕ್ಟರೇಟ್ ಬಿರುದು ಲಭಿಸಿದೆ. ‘ಕೊರಗ ಬುಡಕಟ್ಟು ಜನಾಂಗದ ಆರೋಗ್ಯ ಮತ್ತು ನೈರ್ಮಲ್ಯಗಳಲ್ಲಿ ಶೈಕ್ಷಣಿಕ ಹಸ್ತಕ್ಷೇಪ’ ಎಂಬ ವಿಷಯದ ಬಗ್ಗೆ ಡಾ.ಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಕೇಂದ್ರೀಯ ವಿವಿಯ ಡಾಕ್ಟರೇಟ್ ಬಿರುದು ಲಭಿಸಿದೆ.
ಯಕ್ಷಗಾನ ,ನಾಟಕಕಾರ, ಪ್ರಸಾಧನ ಕಲಾವಿದ ಸುಂದರ ಅಪ್ಪಯ್ಯಮೂಲೆ ಪಶುಸಂಗೋಪನೆ ಇಲಾಖೆಯ ನಿವೃತ್ತ ಉದ್ಯೋಗಿ ಸುಶೀಲ ಕೊರತಿ ದಂಪತಿಗಳ ಪುತ್ರರಾಗಿರುವ ಸ್ವಸ್ತಿಕ್ ದೆಹಲಿಯ ಬ್ರಿಟಿಷ್ ರಾಯಭಾರಿ ಕಚೇರಿಯಲ್ಲಿ ಉದ್ಯೋಗದಲ್ಲಿದ್ದರು. ಪ್ರಸ್ತುತ ಕೇರಳ ಶಂಕರಾಚಾರ್ಯ ಯುನಿವರ್ಸಿಟಿಯ ಪಯ್ಯನ್ನೂರಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೆರ್ಲ ಸತ್ಯನಾರಾಯಣ ಶಾಲೆ, ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರ್ಕಾರಿ ಕಾಲೇಜು, ಶ್ರೀಶಂಕರಾಚಾರ್ಯ ಯುನಿವರ್ಸಿಟಿ ಕಾಲಡಿ ಇಲ್ಲಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಪತ್ನಿ ಶಬೀನಾ ಕೊಟ್ಟಡ, ಪುತ್ರಿ ತಪತಿ ಅಂಗಾರೆ ಜೊತೆ ಸಂತೃಪ್ತ ಸಂಸಾರ ಹೊಂದಿದ್ದಾರೆ.



.jpg)
.jpg)
