ಕುಂಬಳೆ: ಕುಂಬಳೆ ನಾಯ್ಕಾಪಿನಲ್ಲಿರುವ ಪ್ರಾದೇಶಿಕ ಡೈರಿ ಲ್ಯಾಬ್ ಕಮ್ ತರಬೇತಿ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ರಸಾಯನಶಾಸ್ತ್ರ ವಿಶ್ಲೇಷಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳು ಮತ್ತು ಸ್ವವಿವರಗಳನ್ನು ಜುಲೈ 15 ರಂದು ಸಂಜೆ 5 ಗಂಟೆಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಉಪನಿರ್ದೇಶಕರು ಡೈರಿ ಅಭಿವೃದ್ಧಿ ಇಲಾಖೆ ಪ್ರಾದೇಶಿಕ ಡೈರಿ ಲ್ಯಾಬ್ ಕಮ್ ಟ್ರೈನಿಂಗ್ ಸೆಂಟರ್ ನಾಯ್ಕಾಪು, ಕುಂಬಳೆ ಕಾಸರಗೋಡು ಇವರಿಗೆ ಸಲ್ಲಿಸಬೇಕು. ಸಂದರ್ಶನ ಜುಲೈ 18 ರಂದು ಬೆಳಿಗ್ಗೆ 11 ಕ್ಕೆ ನಾಯ್ಕಾಪಿನ ಪ್ರಾದೇಶಿಕ ಡೈರಿ ಲ್ಯಾಬ್‍ನ ಉಪನಿರ್ದೇಶಕರ ಕಛೇರಿಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ :04998290626 ಸಂಪರ್ಕಿಸಲು ಸೂಚಿಸಲಾಗಿದೆ.



