HEALTH TIPS

ಪ್ರಯಾಣಿಕರಿಗೆ ಪರಿಹಾರ ನೀಡದ ಏರ್‌ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಿದ DGCA

          ವದೆಹಲಿ: ರದ್ದುಗೊಂಡ ವಿಮಾನದ ಪ್ರಯಾಣಿಕರಿಗೆ ಪರಿಹಾರ ನೀಡದ ಟಾಟಾ ಒಡೆತನದ ಏರ್‌ ಇಂಡಿಯಾ ವಿಮಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ₹10 ಲಕ್ಷ ದಂಡ ವಿಧಿಸಿದೆ.

          ಜೂನ್‌ ತಿಂಗಳಿನಲ್ಲಿ ಡಿಜಿಸಿಎ ನಡೆಸಿದ ನಿಗದಿತ ದೇಶೀಯ ನಿರ್ವಾಹಕರ ವಾರ್ಷಿಕ ಕಣ್ಗಾವಲು ಕಾರ್ಯಕ್ರಮದಲ್ಲಿ ನಡೆಸಿದ ತಪಾಸಣೆ ವೇಳೆ ಪ್ರಯಾಣಿಕರಿಗೆ ಪರಿಹಾರ ಪಾವತಿ ಮಾಡದಿರುವುದು ಪತ್ತೆಯಾಗಿತ್ತು.

         ಹೀಗಾಗಿ ಏರ್‌ ಇಂಡಿಯಾಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.

ವಿಮಾನಗಳ ರದ್ದತಿಯಿಂದಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರವನ್ನು ಒದಗಿಸುವ ನಿಬಂಧನೆಗಳನ್ನು ಅದು ಪಾಲಿಸಿಲ್ಲ ಎಂದು ಏರ್‌ ಇಂಡಿಯಾದ ಉತ್ತರದಿಂದ ತಿಳಿದುಬಂದಿದೆ ಎಂದು ಡಿಜಿಸಿಎ ಹೇಳಿದೆ.

           ಹೀಗಾಗಿ ಏರ್‌ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಲಾಗಿದೆ. ಯಾವ ನಿಯಮವನ್ನು ಉಲ್ಲಂಘಿಸಲಾಗಿದೆ ಎನ್ನುವುದರ ಬಗ್ಗೆ ನಿಖರ ಮಾಹಿತಿ ಇಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries