HEALTH TIPS

ಮುಂಬೈ | ಅಕ್ರಮವಾಗಿ ಸಾಗಿಸುತ್ತಿದ್ದ ₹9 ಕೋಟಿ ಮೌಲ್ಯದ ಕೊಕೇನ್‌ ವಶ: ಮಹಿಳೆ ಬಂಧನ

 ಮುಂಬೈ: ಬ್ರೆಜಿಲ್‌ ಮೂಲದ ಮಹಿಳೆಯೊಬ್ಬರಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಕೊಕೇನ್‌ ತುಂಬಿದ 124 ಮಾತ್ರೆಗಳನ್ನು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಸೆಪ್ಟೆಂಬರ್‌ 18ರಂದು ಸಾವೊ ಪಾಲೊದಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯನ್ನು ತಡೆದು ಶೋಧ ನಡೆಸಲಾಯಿತು.

ಈ ವೇಳೆ ಭಾರತಕ್ಕೆ ಅಕ್ರಮ ಸಾಗಣೆ ಮಾಡಲು ಮಾದಕ ವಸ್ತುಗಳನ್ನು ಒಳಗೊಂಡ ಮಾತ್ರೆಗಳನ್ನು ಸೇವಿಸಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ' ಎಂದು ಡಿಆರ್‌ಐ ಮುಂಬೈ ವಲಯ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ವೈದ್ಯಕೀಯ ಪರೀಕ್ಷೆಗಾಗಿ ಮಹಿಳೆಯನ್ನು ನಗರದ ಜೆ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ 973 ಗ್ರಾಂ ಕೊಕೇನ್‌ ಹೊಂದಿದ್ದ ಸುಮಾರು 124 ಮಾತ್ರೆಗಳನ್ನು ಹೊರತೆಗೆಯಲಾಗಿದೆ. ಮಹಿಳೆಯನ್ನು ಬಂಧಿಸಲಾಗಿದೆ. ಅಂತರರಾಷ್ಟ್ರೀಯ ಡ್ರಗ್‌ ಸಿಂಡಿಕೇಟ್‌ನ ಇತರ ಸದಸ್ಯರನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ. ವಶಪಡಿಸಿಕೊಂಡ ಕೊಕೇನ್‌ ಮೌಲ್ಯ ₹9.73 ಕೋಟಿ ಎಂದು ಅಂದಾಜಿಸಲಾಗಿದೆ' ಎಂದು ಅಧಿಕಾರಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries