ಆಗ್ರಾ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ತಾಜ್ ಮಹಲ್‌ನ ಮುಖ್ಯ ಗೋಪುರದಲ್ಲಿ ನೀರಿನ ಸೋರಿಕೆ ಆಗುತ್ತಿದ್ದು, ಮಹಲ್‌ನ ಆವರಣದಲ್ಲಿರುವ ಉದ್ಯಾನ ನೀರಿನಲ್ಲಿ ಮುಳುಗಿದೆ.
0
samarasasudhi
ಸೆಪ್ಟೆಂಬರ್ 15, 2024
ಆಗ್ರಾ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ತಾಜ್ ಮಹಲ್‌ನ ಮುಖ್ಯ ಗೋಪುರದಲ್ಲಿ ನೀರಿನ ಸೋರಿಕೆ ಆಗುತ್ತಿದ್ದು, ಮಹಲ್‌ನ ಆವರಣದಲ್ಲಿರುವ ಉದ್ಯಾನ ನೀರಿನಲ್ಲಿ ಮುಳುಗಿದೆ.
ತಾಜ್ ಮಹಲ್ ಆವರಣದ ಉದ್ಯಾನವು ಜಲಾವೃತವಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಸಾಕಷ್ಟು ಹಂಚಿಕೆಯಾಗಿದ್ದು, ಪ್ರಯಾಣಿಕರ ಗಮನಸೆಳೆಯುತ್ತಿದೆ.
ಆಗ್ರಾ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮುಖ್ಯ ಅಧೀಕ್ಷಕ ರಾಜ್‌ಕುಮಾರ್ ಪಟೇಲ್ ಅವರು, 'ತಾಜ್ ಮಹಲ್‌ನ ಮುಖ್ಯ ಗೋಪುದಲ್ಲಿ ಸೋರಿಕೆ ಆಗುತ್ತಿರುವುದನ್ನು ಗಮನಿಸಿದ್ದೇವೆ. ನಾವು ಪರಿಶೀಲಿಸಿದಾಗ ಇದು ಸ್ವಾಭಾವಿಕ ಎಂದು ತಿಳಿದುಬಂದಿದ್ದು, ಗೋಪುರಕ್ಕೆ ಯಾವುದೇ ಹಾನಿಯಾಗಿಲ್ಲ. ಮುಖ್ಯ ಗೋಪುರವನ್ನು ಡ್ರೋನ್ ಕ್ಯಾಮೆರಾ ಮೂಲಕ ಪರಿಶೀಲಿಸಿದ್ದೇವೆ' ಎಂದು ತಿಳಿಸಿದ್ದಾರೆ.
ಉದ್ಯಾನ ಜಲಾವೃತವಾಗಿರುವ 20 ಸೆಕೆಂಡುಗಳ ವಿಡಿಯೊ ಗುರುವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹಂಚಿಕೆಯಾಗಿದ್ದು, ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಸಹ ಅದರ ವಿಡಿಯೊ ಚಿತ್ರೀಕರಿಸಿಕೊಂಡಿದ್ದಾರೆ.
ಸತತ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಳೆಗಳು ನೀರಿನಲ್ಲಿ ಮುಳುಗಿದ್ದು, ಸ್ಥಳೀಯರು ಪ್ರವಾಹದ ಪರಿಣಾಮ ಎದುರಿಸುವಂತಾಗಿದೆ. ಆಗ್ರಾ ಸರ್ಕಾರಿ ಆಡಳಿತವು ಎಲ್ಲ ಶಾಲೆಗಳಿಗೆ ರಜೆ ನೀಡಲು ಆದೇಶಿಸಿದೆ.