ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಎಐಸಿಸಿ ಹಿರಿಯ ವೀಕ್ಷಕರನ್ನಾಗಿ ಅಶೋಕ್ ಗೆಹಲೋತ್, ಅಜಯ್ ಮಾಕನ್ ಮತ್ತು ಪರತಾಪ್ ಸಿಂಗ್ ಬಾಜ್ವಾ ಅವರನ್ನು ಕಾಂಗ್ರೆಸ್ ಶನಿವಾರ ನೇಮಿಸಿದೆ.
0
samarasasudhi
ಸೆಪ್ಟೆಂಬರ್ 15, 2024
ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಎಐಸಿಸಿ ಹಿರಿಯ ವೀಕ್ಷಕರನ್ನಾಗಿ ಅಶೋಕ್ ಗೆಹಲೋತ್, ಅಜಯ್ ಮಾಕನ್ ಮತ್ತು ಪರತಾಪ್ ಸಿಂಗ್ ಬಾಜ್ವಾ ಅವರನ್ನು ಕಾಂಗ್ರೆಸ್ ಶನಿವಾರ ನೇಮಿಸಿದೆ.
ಈ ನೇಮಕಾತಿಯನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಮಾಕೆನ್ ಪಕ್ಷದ ಖಜಾಂಚಿಯಾಗಿದ್ದರೆ, ಅಶೋಕ್ ಗೆಹಲೋತ್ ರಾಜಸ್ಥಾನದಲ್ಲಿ ಮುಖ್ಯಮಂತ್ರಿಯಾಗಿದ್ದವರು. ಬಾಜ್ವಾ ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ಹರಿಯಾಣ ಚುನಾವಣೆಗೆ ಪಕ್ಷವು 89 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಸಿಪಿಎಂಗೆ ಭಿವಾನಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ಮತ್ತು ಅ.8ರಂದು ಮತ ಎಣಿಕೆ ನಡೆಯಲಿದೆ.