ಕಾಸರಗೋಡು: ಕೇರಳ ಪೆನ್ಶನರ್ಸ್ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ಸಭೆ ಬುಧವಾರ ನಡೆಯಿತು. ಸರ್ಕಾರ ರಾಜ್ಯದ ಎಲ್ಲಾ ನೌಕರಿಗೂ ಪಿಂಚಣಿದಾರಿಗೂ ನೀಡಿದ ಎರಡು ಕಂತು ತುಟ್ಟಿಭತ್ಯೆ(2% ಮತ್ತು 3%) ಯಲ್ಲಿ 39 ಮತ್ತು 40 ತಿಂಗಳು ಗಳ ಬಾಕಿ ಮೊತ್ತವನ್ನು ನೀಡದೆ, ವಂಚನೆ ಮಾಡಿರುವ ನಿರ್ಧಾರವನ್ನು ಪ್ರತಿಭಟಿಸಿ ನವೆಂಬರ್ ತಿಂಗಳ 1 ರಿಂದ 7 ತನಕ ಕಾಸರಗೋಡು ಜಿಲ್ಲೆಯ ಎಲ್ಲಾ ಸಬ್ ಟ್ರಶರಿಗಳ ಎದುರು ಪ್ರತಿಭಟಿಸಲು ತೀರ್ಮಾನಿಸಲಾಯಿತು. ಮುಂಬರುವ ಜಿಲ್ಲಾ ಸಮ್ಮೇಳನವನ್ನು ಚೆಂಗಳ ಸಮೀಪದ ಕುಂಜರಿಕಾನ ಶ್ರೀದುರ್ಗಾಪರಮೇಶ್ವರಿ ಸಭಾ ಭÀವನದಲ್ಲಿ ಜನವರಿಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಮುತ್ತುಕೃಷ್ಣನ್ ಯಂ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಈಶ್ವರ ರಾವ್ ಯಂ ಹಾಗೂ ಜಿಲ್ಲಾ ಸಮಿತಿ ಕಾರ್ಯದರ್ಶಿ ನಾಗರಾಜ ಬಾಳಿಕೆ ಮಾತನಾಡಿದರು.