ಉಪ್ಪಳ: ಪೈವಳಿಕೆ ಪಂಚಾಯತಿಯಲ್ಲಿ ನಡೆಯುವ ಭ್ರಷ್ಟಾಚಾರ, ಹಾಗೂ ಸ್ವಜಾನಪಕ್ಷಪಾತ ಮತ್ತು ಉದ್ಯೋಗಸ್ತರ ಅಭಾವವನ್ನು ಖಂಡಿಸಿ ಬಿಜೆಪಿ ಜನಪ್ರತಿನಿಧಿಗಳು ಬುಧವಾರ ನಡೆಯಬೇಕಿದ ಬೋರ್ಡ್ ಮೀಟಿಂಗ್ ಬಹಿಷ್ಕರಿಸಿ ಪ್ರತಿಭಟಸಿದರು.
ದಾರಿದೀಪಕ್ಕೆ ಮೀಸಲಿಟ್ಟ ಸುಮಾರು 32ಲಕ್ಷ ರೂ ಗಳನ್ನು ಹಣಕಾಸು ಸಮಿತಿಯ ಗಮನಕ್ಕೆ ಬಾರದೆ ಗುತ್ತಿಗೆದಾರನಿಗೆ ಮೊತ್ತವನ್ನು ನೀಡಿ ಭ್ರಷ್ಟಾಚಾರ ನಡೆಸಿರುವುದನ್ನು ವಿರೋಧಿಸಿ ಪೈವಳಿಕೆ ಪಂಚಾಯತಿಯ ಬಿಜೆಪಿ ಜನಪ್ರತಿನಿಧಿನಗಳು ಬೋರ್ಡ್ ಮೀಟಿಂಗ್ ಬಹಿಸ್ಕರಿಸಿ ವಿರೋಧ ವ್ಯಕ್ತಪಡಿಸಿದರು. ಜೊತೆಗೆ ಪೂರ್ಣಾವಧಿ ಕಾರ್ಯದರ್ಶಿಯ ನೇಮಕವಾಗಬೇಕು ಹಾಗೂ ಸಹಾಯಕ ಅಭಿಯಂತರ, ಕ್ಲರ್ಕ್‍ಗಳ ಅಭಾವ ಇದ್ದು ನೇಮಕಾತಿ ಕೂಡಲೇ ಮಾಡಬೇಕೆಂದು ಬಿಜೆಪಿ ಸದಸ್ಯರು ಅಗ್ರಹಿಸಿದರು.
ಬಿಜೆಪಿ ಜನಪ್ರತಿನಿಧಿನಗಳು ಹಾಗೂ ನೇತಾರರಾದ ಪಂಚಾಯತಿ ಮಾಜಿ ಅಧ್ಯಕ್ಷ ಮಣಿಕಂಠ ರೈ, ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ಮುಖಂಡರಾದ ಲೋಕೇಶ್ ನೋಂಡ, ಸದಾಶಿವ ಚೇರಾಲ್, ಪ್ರವೀಣ್ ಚಂದ್ರ ಬಲ್ಲಾಳ್, ಸತ್ಯ ಶಂಕರ್ ಭಟ್, ಕೀರ್ತಿ ಭಟ್ ಮೊದಲದವರು ಉಪಸ್ಥಿತರಿದ್ದು ಭ್ರಷ್ಟ ನಿಲುವು ಖಂಡಿಸಿ ಮಾತನಾಡಿದರು.