ನವದೆಹಲಿ: ದೇಶದ ಹಲವು ವಿಮಾನಯಾನ ಸಂಸ್ಥೆಗಳಿಗೆ ಇತ್ತೀಚಿನ ಕೆಲ ದಿನಗಳಲ್ಲಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿರುವುದಕ್ಕೆ ಸಂಬಂಧಿಸಿ, ಸಾಮಾಜಿಕ ಜಾಲತಾಣ 'ಎಕ್ಸ್' ಕಾರ್ಯವೈಖರಿ ಕುರಿತು ಕೇಂಧ್ರ ಸರ್ಕಾರ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
0
samarasasudhi
ಅಕ್ಟೋಬರ್ 24, 2024
ನವದೆಹಲಿ: ದೇಶದ ಹಲವು ವಿಮಾನಯಾನ ಸಂಸ್ಥೆಗಳಿಗೆ ಇತ್ತೀಚಿನ ಕೆಲ ದಿನಗಳಲ್ಲಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿರುವುದಕ್ಕೆ ಸಂಬಂಧಿಸಿ, ಸಾಮಾಜಿಕ ಜಾಲತಾಣ 'ಎಕ್ಸ್' ಕಾರ್ಯವೈಖರಿ ಕುರಿತು ಕೇಂಧ್ರ ಸರ್ಕಾರ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
'ಎಕ್ಸ್' ಮೂಲಕ ಹಂಚಿಕೆಯಾಗಿರುವ ಬೆದರಿಕೆ ಸಂದೇಶಗಳು ಹುಸಿ ಎಂದು ಸಾಬೀತಾಗಿವೆ.
ಸಂಕೇತ್ ಅವರು ವಿಮಾನಯಾನ ಸಂಸ್ಥೆಗಳು ಹಾಗೂ ಎಕ್ಸ್, ಮೆಟಾ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳ ವೇದಿಕೆಗಳ ಪ್ರತಿನಿಧಿಗಳೊಂದಿಗೆ ವರ್ಚುವಲ್ ಆಗಿ ಸಭೆ ನಡೆಸಿದರು.
'ಎಕ್ಸ್' ಕಾರ್ಯವೈಖರಿ ಕುರಿತು ಅಸಮಾಧಾನ ಹೊರಹಾಕಿದ ಸಂಕೇತ್ ಅವರು, ಸುಳ್ಳು ಸಂದೇಶಗಳನ್ನು ತನ್ನ ವೇದಿಕೆ ಮೂಲಕ ಹಂಚಿಕೊಳ್ಳಲಾಗಿದ್ದು, ಈ ಕುರಿತು ಕೈಗೊಂಡ ಕ್ರಮಗಳೇನು ಎಂದು 'ಎಕ್ಸ್' ಪ್ರತಿನಿಧಿಗಳನ್ನು ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.
'ಹುಸಿ ಸಂದೇಶಗಳ ಹಂಚಿಕೆಗೆ ಅನುವು ಮಾಡಿಕೊಡುವುದು ಅಂದರೆ, ಅಪರಾಧ ಕೃತ್ಯಕ್ಕೆ 'ಎಕ್ಸ್' ಕುಮ್ಮಕ್ಕು ನೀಡಿದಂತೆ ಆಗುತ್ತದೆ' ಎಂದು ಸಚಿವಾಲಯದ ಅಧಿಕಾರಿಗಳು ಕಟು ಮಾತುಗಳಲ್ಲಿ ಹೇಳಿದ್ದಾರೆ. ಹುಸಿ ಸಂದೇಶಗಳ ಪ್ರಸರಣ ಪರಿಶೀಲಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಹಾಗೂ ಇಂತಹ ಸಂದೇಶಗಳು ಹಂಚಿಕೆಯಾಗುವುದನ್ನು ತಕ್ಷಣವೇ ತಡೆಗಟ್ಟಬೇಕು ಎಂಬುದಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸಚಿವಾಲಯ ಸೂಚಿಸಿದೆ ಎಂದು ಮೂಲಗಳು ಹೇಳಿವೆ.
ಈ ಕುರಿತು ಕ್ರಮ ಕೈಗೊಳ್ಳುವ ಭರವಸೆಯನ್ನು ಸಾಮಾಜಿಕ ಮಾಧ್ಯಮಗಳು ನೀಡಿದವು. ಸುಳ್ಳು ಸುದ್ದಿಗಳನ್ನು ಹಂಚಿಕೆ ಮಾಡಿಕೊಂಡಿದ್ದ ಹಲವು ಖಾತೆಗಳನ್ನು ಸ್ಥಗಿತಗೊಳಿಸಿದ್ಧಾಗಿಯೂ ತಿಳಿಸಿದವು ಎಂದು ಮೂಲಗಳು ಹೇಳಿವೆ.